ಉಡುಪಿ ಗ್ರಾಮಕರಣಿಕರ (VA) ನೇರ ನೇಮಕಾತಿ:  ಉಡುಪಿ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ (Village Accountants) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 12 ಹುದ್ದೆಗಳಿದ್ದು ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.

ಒಟ್ಟು ಹುದ್ದೆಗಳು :  12

ವಯೋಮಿತಿ :

 1. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 18 ರಿಂದ 35 ವರ್ಷ
 2. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 18ರಿಂದ 38 ವರ್ಷ
 3. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ : 18 ರಿಂದ 40 ವರ್ಷ

ವಿದ್ಯಾರ್ಹತೆ: 

 1. ದ್ವಿತೀಯ ಪಿಯುಸಿ ಅಥವ 12ನೇ ತರಗತಿಯನ್ನು ಐಸಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 2. ಜೆಒಸಿ, ಡಿಪ್ಲೊಮೋ ಮುಂತಾದ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.
 3. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

ಅರ್ಜಿ ಶುಲ್ಕ :

 1. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : 250 ರೂ. ಅರ್ಜಿ ಶುಲ್ಕ
 2. ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಕ್ಕೆ : 500 ರೂ. ಶುಲ್ಕ

 

ಅರ್ಜಿ ಸಲ್ಲಿಸುವ ವಿಧಾನ :

 1. ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
 2. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಚಲನ್ನನ್ನು ಮುದ್ರಿಸಿಕೊಂಡು ನಿಗದಿತ ಬ್ಯಾಂಕಿನಲ್ಲಿ ಶುಲ್ಕವನ್ನು ಪಾವತಿಸುವುದು.
 3. ಶುಲ್ಕ ಪಾವತಿಯ ನಂತರ ಚಲನ್ನಿನ ಪ್ರತಿಯನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ಅರ್ಜಿಯ ನಿಗದಿತ ಕಾಲಂನಲ್ಲಿ ಅಪ್ ಲೋಡ್ ಮಾಡುವುದು.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.06.2016

 

ಅಧಿಕೃತ ನೇಮಕಾತಿ ಅಧಿಸೂಚನೆ ಮತ್ತು ಆನ್ ಲೈನ್ ಅರ್ಜಿಗಾಗಿ : ಇಲ್ಲಿ ಕ್ಲಿಕ್ ಮಾಡಿ