Mangalore Jobs

ದಕ್ಷಿಣ ಕನ್ನಡ ಜಿಲ್ಲೆ ಕಂದಾಯ ಇಲಾಖೆ – ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ನೇರನೇಮಕಾತಿ – 2015

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲೆ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿಗಳ ಖಾಲಿ ಇರುವ 40 ಹುದ್ದೆಗಳನ್ನು ತುಂಬಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಅಥವಾ ಮಂಗಳೂರು ಜಿಲ್ಲೆ ಮಂಗಳೂರು ತಾಲೂಕು, ಬಂಟ್ವಾಳ ತಾಲೂಕು, ಬೆಳ್ತಂಗಡಿ ತಾಲೂಕು, ಪುತ್ತೂರು ತಾಲೂಕು, ಸುಳ್ಯ ತಾಲೂಕುಗಳನ್ನು ಒಳಗೊಂಡಿದೆ. ಗ್ರಾಮಲೆಕ್ಕಿಗ ನೇರ ನೇಮಕಾತಿ 2015, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳಿಗೆ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸಿದೆ.

 

ಖಾಲಿ ಇರುವ ಹುದ್ದೆಗಳ ವಿವರ:

1. ಒಟ್ಟು ಹುದ್ದೆಗಳು: 40 ಹುದ್ದೆಗಳು.

 1. ಜನರಲ್: 20 ಹುದ್ದೆಗಳು
 2. SC: 06 ಹುದ್ದೆಗಳು.
 3. ST: 01 ಹುದ್ದೆಗಳು
 4. ಕೆಟಗರಿ-1: 02 ಹುದ್ದೆಗಳು.
 5. 2A: 06 ಹುದ್ದೆಗಳು.
 6. 2B: 02 ಹುದ್ದೆಗಳು.
 7. 3A: 01 ಹುದ್ದೆಗಳು.
 8. 3B: 02 ಹುದ್ದೆಗಳು.

 

 

ವೇತನ ಶ್ರೇಣಿ: 11600-200-12000-250-13000-300-14200-350-

15600-400-17200-450-19000-500-21000

 

ವಯಸ್ಸಿನ ಮಿತಿ:

 1. ಜನರಲ್ ಕೆಟಗರಿಯವರಿಗೆ 18 ರಿಂದ 35 ವರ್ಷಗಳು.
 2. 2A, 2B, 3A, 3B ಕೆಟಗರಿ ಅಭ್ಯರ್ಥಿಗಳಿಗೆ  18 ರಿಂದ 38 ವರ್ಷಗಳು.
 3. ಕೆಟಗರಿ-1, SC, ST ಅಭ್ಯರ್ಥಿಗಳಿಗೆ 18 ರಿಂದ 40 ವರ್ಷಗಳು.
 4. ಹೆಚ್ಚಿನ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಓದಬಹುದು. (ಕನ್ನಡ ಭಾಷೆ)

 

ವಿದ್ಯಾರ್ಹತೆ:

 1. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ CBSE/ICSE ಅಥವಾ ತತ್ಸಮಾನ ಕೋರ್ಸಿನಲ್ಲಿ ಪಾಸಾಗಿರಬೇಕು.
 2. ಕನ್ನಡ ಭಾಷೆ ಕಡ್ದಾಯವಾಗಿ ತಿಳಿದಿರಬೇಕು
 3. ಕಂಪ್ಯೂಟರ್ ಜ್ಞಾನವಿರಬೇಕು.
 4. ಈ ಹುದ್ದೆಗೆ ಜೆಒಸಿ/ಡಿಪ್ಲೊಮಾ ಅಥವಾ ಯಾವುದೇ ತಾಂತ್ರಿಕ ಶಿಕ್ಷಣ ಪಡೆದ ಅಭ್ಯರ್ಥಿಗಳು ಅರ್ಹರಲ್ಲ.

 

 

 

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/09/2015

ಸಹಾಯವಾಣಿ ಸಂಖ್ಯೆ: 0824-2220590

 

ಅರ್ಜಿ ಶುಲ್ಕ:

 1. SC/ST/CAT-1 ಅಭ್ಯರ್ಥಿಗಳಿಗೆ: ರೂ 250
 2. ಜನರಲ್, 2A, 2B, 3A, 3B ಅಭ್ಯರ್ಥಿಗಳಿಗೆ: ರೂ 500.

 

ಅಧಿಕೃತ ಕೊಂಡಿಗಳು:

 1. ಆನ್ ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ
 2. ಅಧಿಕೃತ ನೇಮಕಾತಿ ಅಧಿಸೂಚನೆ
1 Comment

1 Comment

 1. sharath

  Sep 28, 2015 at 8:46 pm

  vg

Leave a Reply

Your email address will not be published. Required fields are marked *

Most Popular

To Top
%d bloggers like this: