ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅರೆ ವೈದ್ಯಕೀಯ ಹುದ್ದೆಗಳ ನೇಮಕಾತಿಯು ಒಟ್ಟು 2144 ಖಾಲಿ ಹುದ್ದೆಗಳನ್ನೊಳಗೊಂಡಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಖಾಲಿ ಇರುವ ಹುದ್ದೆಗಳ ವಿವರ:

 1. ಶುಶ್ರೂಶಕರು(ಬಿ.ಎಸ್.ಸಿ.ನರ್ಸಿಂಗ್): 179 ಹುದ್ದೆಗಳು (96+83 ಹೈ-ಕ ಪ್ರದೇಶ)
 • ವಿದ್ಯಾರ್ಹತೆ: ಬಿ.ಎಸ್.ಸಿ.ನರ್ಸಿಂಗ್ ಅಥವಾ ತತ್ಸಮಾನ ಕೋರ್ಸ್ ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.
 • ವೇತನ ಶ್ರೇಣಿ: ರೂ 17650 ರಿಂದ 32000 ದವರೆಗೆ

2. ಶುಶ್ರೂಶಕರು( ಡಿಪ್ಲೊಮಾ ನರ್ಸಿಂಗ್): 536 ಹುದ್ದೆಗಳು ( 287+249 ಹೈ-ಕ ಪ್ರದೇಶ)

 • ವಿದ್ಯಾರ್ಹತೆ: ಹತ್ತನೇ ತರಗತಿ/ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು  ಡಿಪ್ಲೊಮಾ ನರ್ಸಿಂಗ್ ( 3 1/2 ವರ್ಷಗಳು) ಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋದಣಿ ಮಾಡಿಸಿರಬೇಕು.
 • ವೇತನ ಶ್ರೇಣಿ: ರೂ 17650 ರಿಂದ 32000 ದವರೆಗೆ

3. ಫಿಸಿಯೋಥೆರಪಿಸ್ಟ್: 17 ಹುದ್ದೆಗಳು (11+06 ಹೈ-ಕ ಪ್ರದೇಶ)

 • ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಫಿಸಿಯೋಥೆರಪಿ ವಿಷಯದ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.
 • ವೇತನ ಶ್ರೇಣಿ: ರೂ 17650 ರಿಂದ 32000 ದವರೆಗೆ

4. ವೈದ್ಯಕೀಯ ದಾಖಲಾತಿ ತಂತ್ರಜ್ಞ: 02 ಹುದ್ದೆಗಳು (00+02 ಹೈ-ಕ ಪ್ರದೇಶ)

 • ವಿದ್ಯಾರ್ಹತೆ: ಪಿ.ಯು.ಸಿ ಯಲ್ಲಿ ಪಾಸಾಗಿರಬೇಕು ಮತ್ತು ಕರ್ನಾಟಕ ಅರೆವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ದಾಖಲಾತಿ ತಂತ್ರಜ್ಞ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು.
 • ವೇತನ ಶ್ರೇಣಿ: ರೂ 16000 ದಿಂದ 29600 ದವರೆಗೆ

5. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ: 12 ಹುದ್ದೆಗಳು (02+10 ಹೈ-ಕ ಪ್ರದೇಶ)

 • ವಿದ್ಯಾರ್ಹತೆ: ಸಮಾಜ ವಿಜ್ಞಾನ ವಿಷಯದಲ್ಲಿ ಪದವಿ ಹೊಂದಿ ಈ ಕೆಳಗಿನ ವಿಷಯಗಳಲ್ಲಿ ತೇರ್ಗಡೆಯಾಗಿರಬೇಕು. Geography or Economics or Sociology or Philosophy, Psychology or Social Work, History or Political Science
 • ವೇತನ ಶ್ರೇಣಿ: ರೂ 16000 ದಿಂದ 29000 ದವರೆಗೆ

6. ಹಿರಿಯ ಪ್ರಯೋಗಶಾಲಾ ತಂತ್ರಜ್ಞ: 26 ಹುದ್ದೆಗಳು ( 05+21 ಹೈ-ಕ ಪ್ರದೇಶ)

 1.  ವಿದ್ಯಾರ್ಹತೆ:
 • ಬಿ.ಎಸ್.ಸಿ. ಪದವಿಯಲ್ಲಿ ರಸಾಯನ ಶಾಸ್ತ್ರವನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಮತ್ತು
 • ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 12 ತಿಂಗಳ ತರಬೇತಿ ಪೂರ್ಣಗೊಳಿಸಿರುವ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು. ಅಥವಾ
 • Bsc in Medical Lab Technology  ಯಲ್ಲಿ ತೇರ್ಗಡೆ ಹೊಂದಿರಬೇಕು.

2. ವೇತನ ಶ್ರೇಣಿ: ರೂ 16000 ದಿಂದ 29000 ದವರೆಗೆ

7. ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞ: 83 ಹುದ್ದೆಗಳು ( 45+38 ಹೈ-ಕ ಪ್ರದೇಶ)

1. ವಿದ್ಯಾರ್ಹತೆ: 

 • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು 2 ವರ್ಷದ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಕರ್ನಾಟಕ ವೊಕೇಶನಲ್ ಶೈಕ್ಷಣಿಕ ಬೋರ್ಡ್ ನಿಂದ ಡಿಪ್ಲೊಮಾ ಹೊಂದಿರಬೇಕು. ಅಥವಾ
 • ಪಿ.ಯು.ಸಿ (ವಿಜ್ಞಾನ) ಯಲ್ಲಿ ಪಾಸಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷದ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿರಬೇಕು. ಅಥವಾ
 • ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿ ಡಿಪ್ಲೊಮಾ ಪಡೆದಿರಬೇಕು.

2. ವೇತನ ಶ್ರೇಣಿ: ರೂ 14550 ರಿಂದ 26700 ರವರೆಗೆ

8. ಫಾರ್ಮಸಿಸ್ಟ್:  202 ಹುದ್ದೆಗಳು ( 100+102 ಹೈ-ಕ ಪ್ರದೇಶ)

 1. ವಿದ್ಯಾರ್ಹತೆ: 
 • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿ ಡಿಪ್ಲೊಮಾ ಹೊಂದಿರಬೇಕು. ಹಾಗೂ

2. ವೇತನ ಶ್ರೇಣಿ: ರೂ 14550 ರಿಂದ 26700 ರವರೆಗೆ

9. ನೇತ್ರಾಧಿಕಾರಿ/ನೇತ್ರ ಸಹಾಯಕರು: 61 ಹುದ್ದೆಗಳು ( 44+17 ಹೈ-ಕ ಪ್ರದೇಶ)

1. ವಿದ್ಯಾರ್ಹತೆ:

 • ಪಿ.ಯು.ಸಿ (ವಿಜ್ಞಾನ) ಯಲ್ಲಿ ಪಾಸಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷದ ನೇತ್ರ ತಂತ್ರಜ್ಞತೆಯ ಡಿಪ್ಲೊಮಾದಲ್ಲಿ ತೇರ್ಗಡೆ ಹೊಂದಿರಬೇಕು.

2. ವೇತನ ಶ್ರೇಣಿ: ರೂ 14550 ರಿಂದ 26700 ರವರೆಗೆ

10. ಕಿರಿಯ ಆರೋಗ್ಯ ಸಹಾಯಕರು: 525 ಹುದ್ದೆಗಳು ( 345+180 ಹೈ+ಕ ಪ್ರದೇಶ)

1.  ವಿದ್ಯಾರ್ಹತೆ:

 •  ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ವಿವಿಧೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ ಪಡೆದಿರಬೇಕು. ಅಥವಾ
 •  ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ವೊಕೇಷನಲ್ ಬೋರ್ಡ್ ನಲ್ಲಿ 2 ವರ್ಷದ ಆರೋಗ್ಯ ನಿರೀಕ್ಷಕರ ಡಿಪ್ಲೊಮದಲ್ಲಿ ತರಬೇತಿ ಪಡೆದಿರಬೇಕು. ಅಥವಾ
 •  ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಹೊಂದಿರಬೇಕು. ಅಥವಾ
 •  ಪಿ.ಯು.ಸಿ (ವಿಜ್ಞಾನ) ಯಲ್ಲಿ ಪಾಸಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಹೊಂದಿರಬೇಕು.

2. ವೇತನ ಶ್ರೇಣಿ: ರೂ 12500 ದಿಂದ 24000 ದವರೆಗೆ

11. ಕಿರಿಯ ಆರೋಗ್ಯ ಸಹಾಯಕರು ( ಮಹಿಳೆ) 501 ಹುದ್ದೆಗಳು : ( 220+281  ಹೈ+ಕ ಪ್ರದೇಶ)

1. ವಿದ್ಯಾರ್ಹತೆ:

 • ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
 • ಕರ್ನಾಟಕ ರಾಜ್ಯದ ಸರ್ಕಾರಿ ಕಿರಿಯ ಆರೋಗ್ಯ ಸಹಾಯಕರು (ಮಹಿಳಾ) ತರಬೇತಿ ಸಂಸ್ಥೆಗಳಲ್ಲಿ ಅಥವಾ
 • ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಲ್ಲಿ ಕಿರಿಯ ಆರೋಗ್ಯ ಸಹಾಯಕರು (ಮಹಿಳೆ)  (ANM) ತರಬೇತಿ ಹೊಂದಿರಬೇಕು. ಮತ್ತು
 • ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.

2. ವೇತನ ಶ್ರೇಣಿ: ರೂ 12500 ದಿಂದ 24000 ದವರೆಗೆ

 

ದಯವಿಟ್ಟು ಗಮನಿಸಿ: ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇನ್ನಿತರೆ ವಿದ್ಯಾರ್ಹತೆಯನ್ನು ಅರೆ ವೈದ್ಯಕೀಯ ಹುದ್ದೆಗಳ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

 

ವಯಸ್ಸಿನ ಮಿತಿ:

 1. ಸಾಮಾನ್ಯ ವರ್ಗ: ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 35 ವರ್ಷಗಳು
 2. 2ಎ, 2ಬಿ, 3ಎ, 3ಬಿ ವರ್ಗ: ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 38 ವರ್ಷಗಳು
 3. SC, ST, ಪ್ರವರ್ಗ-1 : ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 40 ವರ್ಷಗಳು

ಅರ್ಜಿ ಶುಲ್ಕ:

 1. ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ: ರೂ 300
 2. SC, ST, ಪ್ರವರ್ಗ- 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ: ರೂ 100

ಸಹಾಯವಾಣಿ ಸಂಖ್ಯೆಗಳು:

 1. ಆನ್ ಲೈನ್ ಅರ್ಜಿ ಸಲ್ಲಿಸುವಾಗ 080-22873151, 080-22340197, 080-22251995
 2. ಅರ್ಜಿ ಶುಲ್ಕ ಪಾವತಿಸುವ ಕುರಿತು : 080-22392668, 080-22392661

ಮುಖ್ಯವಾದ ದಿನಾಂಕಗಳು:

 1. ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-11-2015
 2. ಅರ್ಜಿ ಶುಲ್ಕವನ್ನು ಅಂಚೆಕಛೇರಿಯಲ್ಲಿ ಪಾವತಿಸಲು ಕೊನೆಯ ದಿನಾಂಕ: 28-11-2015

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಅಧಿಸೂಚನೆಯನ್ನು ನೋಡಿ.

 

ಅಧಿಕೃತ ಕೊಂಡಿಗಳು:

 1. ಅಧಿಕೃತ ಅಧಿಸೂಚನೆ: (Read Before Apply)
 2. ಆನ್ ಲೈನ್ ಅರ್ಜಿ: (Apply Online)