ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ.(ಮೆಸ್ಕಾಂ) ಮಂಗಳೂರು, ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಮೆಸ್ಕಾಂ ನೇಮಕಾತಿ 2016 ರ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳತಕ್ಕದ್ದು.

 

ಖಾಲಿ ಇರುವ ಹುದ್ದೆಗಳ ವಿವರ :
1. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಎಲೆಕ್ಟ್ರಿಕಲ್)/ಇಲೆಕ್ಟ್ರಿಕಲ್ ನಲ್ಲಿ AMIE
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 64

2. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಕಂಪ್ಯೂಟರ್ ಸೈನ್ಸ್)/ಬಿ.ಇ. (ಇನ್ ಫಾರ್ಮೇಶನ್ ಸೈನ್ಸ್)/ಬಿ.ಇ. (ಇನ್ ಫಾರ್ಮೇಶನ್ ಟೆಕ್ನಾಲಜಿ)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

3. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

4. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ಸಿವಿಲ್)
ವಿದ್ಯಾರ್ಹತೆ : ಬಿ.ಇ.(ಸಿವಿಲ್ ಇಂಜಿನಿಯರಿಂಗ್)/AMIE ಸೆಕ್ಷನ್ ಎ & ಬಿ (ಸಿವಿಲ್)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

5. ಹುದ್ದೆಯ ಹೆಸರು : ಸಹಾಯಕ ಲೆಕ್ಕಾಧಿಕಾರಿ
ವಿದ್ಯಾರ್ಹತೆ : ಎಂ.ಕಾಂ/ಎಂ.ಬಿ.ಎ (ಫೈನಾನ್ಸ್)/ICWA ನಲ್ಲಿ ತೇರ್ಗಡೆ
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 41

6. ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 95

7. ಹುದ್ದೆಯ ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 11

8. ಹುದ್ದೆಯ ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 6

9. ಹೆಸರು : ಕಿರಿಯ ಇಂಜಿನಿಯರ್ (ಸಿವಿಲ್)
ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 7

10. ಹುದ್ದೆಯ ಹೆಸರು : ಸಹಾಯಕ
ವಿದ್ಯಾರ್ಹತೆ : ಪದವಿ ಅಥವಾ ತತ್ಸಮಾನ
ವೇತನ ಶ್ರೇಣಿ : ರೂ. 10250-25180
ಒಟ್ಟು ಹುದ್ದೆಗಳು : 122

11. ಹುದ್ದೆಯ ಹೆಸರು : ಕಿರಿಯ ಸಹಾಯಕ
ವಿದ್ಯಾರ್ಹತೆ : ಪದವಿ ಪೂರ್ವ ಅಥವಾ ತತ್ಸಮಾನ
ವೇತನ ಶ್ರೇಣಿ : ರೂ. 9050-23080
ಒಟ್ಟು ಹುದ್ದೆಗಳು : 74

 

ಅರ್ಹತೆ :
ಅರ್ಹತಾದಾಯಕ ಪರೀಕ್ಷೆಗಳಲ್ಲಿ ಕೆಳಗೆ ತಿಳಿಸಿರುವಷ್ಟು ಕನಿಷ್ಟ ಶೇಕಡಾವಾರು ಅಂಕಗಳನ್ನು ಪಡೆದಿರುವಂತಹ ಅಭ್ಯರ್ಥಿಗಳು ಮಾತ್ರ ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

 • ಸಾಮಾನ್ಯ ಅರ್ಹತೆಗೆ ಸೇರಿದ ಅಭ್ಯರ್ಥಿಗಳು : 60%
 • 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು : 50%
 • ಎಸ್.ಸಿ/ಎಸ್.ಟಿ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು : ತೇರ್ಗಡೆ

ಆಯ್ಕೆಯ ವಿಧಾನ :
ಮೇಲಿನ ಹುದ್ದೆಗಳಿಗೆ ಆಯ್ಕೆಯನ್ನು ಸಂಪೂರ್ಣವಾಗಿ ಅಭ್ಯರ್ಥಿಗಳು ಯೋಗ್ಯತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿ ಮಾಡಲಾಗುವುದು.

ವಯೋಮಿತಿ : (ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು)
ಕನಿಷ್ಟ ವಯಸ್ಸು : 18 ವರ್ಷಗಳು
ಗರಿಷ್ಟ ವಯಸ್ಸು :

 • ಸಾಮಾನ್ಯ : 35 ವರ್ಷಗಳು
 • 2ಎ, 2ಬಿ, 3ಎ, 3ಬಿ : 38 ವರ್ಷಗಳು
 • ಎಸ್.ಸಿ/ಎಸ್.ಟಿ, ಕೆಟಗರಿ-1 : 40 ವರ್ಷಗಳು

ಅರ್ಜಿ ಶುಲ್ಕ :

 • ಸಾಮಾನ್ಯ, ಕೆಟಗರಿ-1, 2ಎ, 2ಬಿ, 3ಎ, 3ಬಿ : ರೂ. 500
 • ಎಸ್.ಸಿ/ಎಸ್.ಟಿ : ರೂ. 250
 • ಅಂಗವಿಕಲ ಅಭ್ಯರ್ಥಿಗಳಿಗೆ : ವಿನಾಯಿತಿ (Exempted)

ಮುಖ್ಯವಾದ ದಿನಾಂಕಗಳು :

 • ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.02.2016 ರ ಸಂಜೆ 5.00 ಗಂಟೆ
 • ಅಂಚೆಕಛೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 16.02.2016

 

ಅಧಿಕೃತ ಕೊಂಡಿಗಳು :
ಮೆಸ್ಕಾಂ ನೇಮಕಾತಿ – ಅಧಿಸೂಚನೆ

ಮೆಸ್ಕಾಂ ಹುದ್ದೆ ಆನ್ ಲೈನ್ ಅರ್ಜಿ