Mangalore Jobs

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. (ಮೆಸ್ಕಾಂ): ವಿವಿಧ ಹುದ್ದೆಗಳ ನೇಮಕಾತಿ

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ.(ಮೆಸ್ಕಾಂ) ಮಂಗಳೂರು, ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಮೆಸ್ಕಾಂ ನೇಮಕಾತಿ 2016 ರ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳತಕ್ಕದ್ದು.

 

ಖಾಲಿ ಇರುವ ಹುದ್ದೆಗಳ ವಿವರ :
1. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಎಲೆಕ್ಟ್ರಿಕಲ್)/ಇಲೆಕ್ಟ್ರಿಕಲ್ ನಲ್ಲಿ AMIE
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 64

2. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಕಂಪ್ಯೂಟರ್ ಸೈನ್ಸ್)/ಬಿ.ಇ. (ಇನ್ ಫಾರ್ಮೇಶನ್ ಸೈನ್ಸ್)/ಬಿ.ಇ. (ಇನ್ ಫಾರ್ಮೇಶನ್ ಟೆಕ್ನಾಲಜಿ)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

3. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಬಿ.ಇ. (ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

4. ಹುದ್ದೆಯ ಹೆಸರು : ಸಹಾಯಕ ಇಂಜಿನಿಯರ್ (ಸಿವಿಲ್)
ವಿದ್ಯಾರ್ಹತೆ : ಬಿ.ಇ.(ಸಿವಿಲ್ ಇಂಜಿನಿಯರಿಂಗ್)/AMIE ಸೆಕ್ಷನ್ ಎ & ಬಿ (ಸಿವಿಲ್)
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 7

5. ಹುದ್ದೆಯ ಹೆಸರು : ಸಹಾಯಕ ಲೆಕ್ಕಾಧಿಕಾರಿ
ವಿದ್ಯಾರ್ಹತೆ : ಎಂ.ಕಾಂ/ಎಂ.ಬಿ.ಎ (ಫೈನಾನ್ಸ್)/ICWA ನಲ್ಲಿ ತೇರ್ಗಡೆ
ವೇತನ ಶ್ರೇಣಿ : ರೂ. 18380-32610
ಒಟ್ಟು ಹುದ್ದೆಗಳು : 41

6. ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 95

7. ಹುದ್ದೆಯ ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 11

8. ಹುದ್ದೆಯ ಹೆಸರು : ಕಿರಿಯ ಇಂಜಿನಿಯರ್ (ವಿದ್ಯುತ್)
ವಿದ್ಯಾರ್ಹತೆ : ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 6

9. ಹೆಸರು : ಕಿರಿಯ ಇಂಜಿನಿಯರ್ (ಸಿವಿಲ್)
ವಿದ್ಯಾರ್ಹತೆ : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ
ವೇತನ ಶ್ರೇಣಿ : ರೂ. 11750-29070
ಒಟ್ಟು ಹುದ್ದೆಗಳು : 7

10. ಹುದ್ದೆಯ ಹೆಸರು : ಸಹಾಯಕ
ವಿದ್ಯಾರ್ಹತೆ : ಪದವಿ ಅಥವಾ ತತ್ಸಮಾನ
ವೇತನ ಶ್ರೇಣಿ : ರೂ. 10250-25180
ಒಟ್ಟು ಹುದ್ದೆಗಳು : 122

11. ಹುದ್ದೆಯ ಹೆಸರು : ಕಿರಿಯ ಸಹಾಯಕ
ವಿದ್ಯಾರ್ಹತೆ : ಪದವಿ ಪೂರ್ವ ಅಥವಾ ತತ್ಸಮಾನ
ವೇತನ ಶ್ರೇಣಿ : ರೂ. 9050-23080
ಒಟ್ಟು ಹುದ್ದೆಗಳು : 74

 

ಅರ್ಹತೆ :
ಅರ್ಹತಾದಾಯಕ ಪರೀಕ್ಷೆಗಳಲ್ಲಿ ಕೆಳಗೆ ತಿಳಿಸಿರುವಷ್ಟು ಕನಿಷ್ಟ ಶೇಕಡಾವಾರು ಅಂಕಗಳನ್ನು ಪಡೆದಿರುವಂತಹ ಅಭ್ಯರ್ಥಿಗಳು ಮಾತ್ರ ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಸಾಮಾನ್ಯ ಅರ್ಹತೆಗೆ ಸೇರಿದ ಅಭ್ಯರ್ಥಿಗಳು : 60%
  • 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು : 50%
  • ಎಸ್.ಸಿ/ಎಸ್.ಟಿ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು : ತೇರ್ಗಡೆ

ಆಯ್ಕೆಯ ವಿಧಾನ :
ಮೇಲಿನ ಹುದ್ದೆಗಳಿಗೆ ಆಯ್ಕೆಯನ್ನು ಸಂಪೂರ್ಣವಾಗಿ ಅಭ್ಯರ್ಥಿಗಳು ಯೋಗ್ಯತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿ ಮಾಡಲಾಗುವುದು.

ವಯೋಮಿತಿ : (ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು)
ಕನಿಷ್ಟ ವಯಸ್ಸು : 18 ವರ್ಷಗಳು
ಗರಿಷ್ಟ ವಯಸ್ಸು :

  • ಸಾಮಾನ್ಯ : 35 ವರ್ಷಗಳು
  • 2ಎ, 2ಬಿ, 3ಎ, 3ಬಿ : 38 ವರ್ಷಗಳು
  • ಎಸ್.ಸಿ/ಎಸ್.ಟಿ, ಕೆಟಗರಿ-1 : 40 ವರ್ಷಗಳು

ಅರ್ಜಿ ಶುಲ್ಕ :

  • ಸಾಮಾನ್ಯ, ಕೆಟಗರಿ-1, 2ಎ, 2ಬಿ, 3ಎ, 3ಬಿ : ರೂ. 500
  • ಎಸ್.ಸಿ/ಎಸ್.ಟಿ : ರೂ. 250
  • ಅಂಗವಿಕಲ ಅಭ್ಯರ್ಥಿಗಳಿಗೆ : ವಿನಾಯಿತಿ (Exempted)

ಮುಖ್ಯವಾದ ದಿನಾಂಕಗಳು :

  • ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.02.2016 ರ ಸಂಜೆ 5.00 ಗಂಟೆ
  • ಅಂಚೆಕಛೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 16.02.2016

 

ಅಧಿಕೃತ ಕೊಂಡಿಗಳು :
ಮೆಸ್ಕಾಂ ನೇಮಕಾತಿ – ಅಧಿಸೂಚನೆ

ಮೆಸ್ಕಾಂ ಹುದ್ದೆ ಆನ್ ಲೈನ್ ಅರ್ಜಿ

 

 

 

5 Comments

5 Comments

  1. rakshitha

    Apr 7, 2016 at 9:18 pm

    ಮೆಸ್ಕಾಂ ಅವ್ರು ಯಾಕೆ ಎಕ್ಸಾಂ ಮುಂದೆ ಹಾಕಿದ್ದಾರೆ ? ಎಷ್ಟು ಸಮಯದಲ್ಲಿ ಎಕ್ಸಾಂ ಮಾಡ್ತಾರೆ ?

  2. joobseeker

    Apr 9, 2016 at 2:43 pm

    ಮೆಸ್ಕಾಂ ಎಕ್ಸಾಂ ಯಾವಾಗ?

  3. ಹೇಮಾವತಿ

    May 7, 2016 at 7:18 pm

    ಸರ್ ಮೆಸ್ಕಾಂ ಎಕ್ಸಾಂ ಯಾವಾಗ? ಯಾಕೆ ಎಕ್ಸಾಂ ಮುಂದೂಡಲಾಗಿದೆ ಅಂತ ಗೊತ್ತಾಗ್ತ ಇಲ್ಲ.ದಯವಿಟ್ಟು ಹೇಳಿ ಸರ್.

  4. ರಾಹುಲ್

    Sep 21, 2016 at 8:41 am

    ಮೆಸ್ಕಾಂ ಹಣ ಪಡೆದುಕೊಂಡು ಸುಮ್ಮನೆ ಇದೆ.1 ಲಕ್ಷಕ್ಕೂ ಜಾಸ್ತಿ ಅಭ್ಯರ್ಥಿಗಳು ಅರ್ಜೀ ಸಲ್ಲಿಸಿದರಂತೆ.9 ತಿಂಗಳಾದರೂ ಪರೀಕ್ಷೆ ಮಾಡುತ್ತಿಲ್ಲ.ಮಾಡುವ ಲಕ್ಷಣ ಇಲ್ಲ.ಯಾರು ಕೂಡ ಸ್ಪಂದಿಸುತ್ತಿಲ್ಲ.ಮಾನ್ಯ ಇಂಧನ ಮಂತ್ರಿಯವರು ನಮಗೊಂದು ಒಳ್ಳೆಯ ಅವಕಾಶ ಒದಗಿಸಿದ್ದರು. ಆದರೆ ಮೆಸ್ಕಾಂ ಅದನ್ನು ಕಿತ್ತು ಕೊಂಡಿದೆ

  5. ಶರಣಪ್ಪ

    Feb 23, 2017 at 1:09 pm

    ಮೆಸ್ಕಾಂ ನಲ್ಲಿ ಮಾತ್ರ ಡಿಪ್ಲೋಮಾ ಕಂಪ್ಯೂಟರ್ ಕರದಿದ್ದರೆ ಅದರೆ ಜೆಸ್ಕಾಂ, ಹೆಸ್ಕಾಂ, Junear Engg Post ಗೆ ಕರದಿರುವುದಿಲ್ಲ. ಇದರ ಬಗ್ಗೆ ಮಾಹಿತಿ ಕೊಡಿ…..

Leave a Reply

Your email address will not be published. Required fields are marked *

Most Popular

To Top
%d bloggers like this: