ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು, ಖಾಲಿ ಇರುವ 45 ವಿವಿಧ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಸಂಸ್ಥೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ/ವಿವಿಧ ಉತ್ಪನ್ನಗಳ ತಯಾರಿಕೆ ಮಾಡಿ ಉತ್ತಮ ಗುಣಮಟ್ಟದ ಪಾಶ್ಚರೀಕರಿಸಿದ ‘ನಂದಿನಿ’ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಸಹಕಾರಿ ಸಂಸ್ಥೆಯಾಗಿದೆ. ಈ ಹುದ್ದೆಗಳನ್ನು ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

 

ಖಾಲಿ ಇರುವ ಹುದ್ದೆಗಳ ವಿವರ :
1. ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕರು (ಎ.ಹೆಚ್./ಎ.ಐ.)
ವಿದ್ಯಾರ್ಹತೆ : ಪಶು ವೈದ್ಯಕೀಯ ವಿಜ್ಞಾನದಲ್ಲಿ Bachelor in Veterinary Science (B.V.Sc) ಅಥವಾ B.V.Sc ಮತ್ತು A.H.ಪದವಿ.
ಪಶು ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ : ರೂ. 28100-50100
ಒಟ್ಟು ಹುದ್ದೆಗಳು : 07

2. ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕರು (ಎಫ್. ಅಂಡ್ ಎಫ್.)
ವಿದ್ಯಾರ್ಹತೆ : B.Sc. (Agriculture) ಪದವಿ. M.Sc ( Agriculture )ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ : ರೂ. 28100-50100
ಒಟ್ಟು ಹುದ್ದೆಗಳು : 01

3. ಹುದ್ದೆಯ ಹೆಸರು : ತಾಂತ್ರಿಕ ಅಧಿಕಾರಿ (ಡಿ.ಟಿ.)
ವಿದ್ಯಾರ್ಹತೆ : B.Sc (DT) ಅಥವಾ B.Tech (D.Tech) ಪದವಿ.
ವೇತನ ಶ್ರೇಣಿ : ರೂ. 22800-43200
ಒಟ್ಟು ಹುದ್ದೆಗಳು : 05

4. ಹುದ್ದೆಯ ಹೆಸರು : ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್)
ವಿದ್ಯಾರ್ಹತೆ : B.E. ಅಥವಾ B.Tech in Electrical & Electronics or Mechanical
ವೇತನ ಶ್ರೇಣಿ : ರೂ. 22800-43200
ಒಟ್ಟು ಹುದ್ದೆಗಳು : 02

5. ಹುದ್ದೆಯ ಹೆಸರು : ಮಾರುಕಟ್ಟೆ ಅಧಿಕಾರಿ
ವಿದ್ಯಾರ್ಹತೆ : MBA in Marketing. ಡಿಪ್ಲೊಮಾ ಇನ್ ಕೋ – ಆಪರೇಟಿವ್ ಬಿಸಿನೆಸ್ ಮ್ಯಾನೇಜ್ ಮೆಂಟ್ ( DCBM ) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ : ರೂ. 22800-43200
ಒಟ್ಟು ಹುದ್ದೆಗಳು : 03

6. ಹುದ್ದೆಯ ಹೆಸರು : ಕಾರ್ಮಿಕ ಕಲ್ಯಾಣ ಅಧಿಕಾರಿ
ವಿದ್ಯಾರ್ಹತೆ : MSW in Human Resource ಅಥವಾ P.G.D.I.R. ಮತ್ತು P.M.
ವೇತನ ಶ್ರೇಣಿ : ರೂ. 22800-43200
ಒಟ್ಟು ಹುದ್ದೆಗಳು : 01

7. ಹುದ್ದೆಯ ಹೆಸರು : ವಿಸ್ತರಣಾಧಿಕಾರಿ ದರ್ಜೆ- III
ವಿದ್ಯಾರ್ಹತೆ : ಯಾವುದೇ ಪದವಿ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕನಿಷ್ಟ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಪ್ರಸ್ತುತ ಒಂದು ವರ್ಷದಿಂದ ಸಂಘದ ಕಾರ್ಯದರ್ಶಿಯಾಗಿ ಸೇವೆಯಲ್ಲಿರಬೇಕು.
ವೇತನ ಶ್ರೇಣಿ : ರೂ. 17650-32000
ಒಟ್ಟು ಹುದ್ದೆಗಳು : 01

ವಿದ್ಯಾರ್ಹತೆ : ಬಿ.ಕಾಂ ಅಥವಾ ಬಿ.ಬಿ.ಎಂ. ಪದವಿಯೊಂದಿಗೆ ಕನಿಷ್ಟ ಆರು ತಿಂಗಳ ಅವಧಿಯ DCBM ಹೊಂದಿರಬೇಕು.
ವೇತನ ಶ್ರೇಣಿ : ರೂ. 17650-32000
ಒಟ್ಟು ಹುದ್ದೆಗಳು : 01

8. ಹುದ್ದೆಯ ಹೆಸರು : ಡೈರಿ ಸೂಪರ್ ವೈಸರ್ ದರ್ಜೆ- II
ವಿದ್ಯಾರ್ಹತೆ : Mechanical Diploma/Civil Diploma/Electrical Diploma/Electronics Diploma/Diploma in Communication Engineering ಮತ್ತು ಕೋ ಆಪರೇಟಿವ್ ಡೈರಿಯಲ್ಲಿ 2 ವರ್ಷದ ಅನುಭವ.
ವೇತನ ಶ್ರೇಣಿ : ರೂ. 17650-32000
ಒಟ್ಟು ಹುದ್ದೆಗಳು : 08

9. ಹುದ್ದೆಯ ಹೆಸರು : ಕಿರಿಯ ಸಿಸ್ಟಂ ಆಪರೇಟರ್
ವಿದ್ಯಾರ್ಹತೆ : ಬಿ.ಸಿ.ಎ.
ವೇತನ ಶ್ರೇಣಿ : ರೂ. 14550-26700
ಒಟ್ಟು ಹುದ್ದೆಗಳು : 01

10. ಹುದ್ದೆಯ ಹೆಸರು : ಕೆಮಿಸ್ಟ್ ದರ್ಜೆ- II
ವಿದ್ಯಾರ್ಹತೆ : ಬಿ.ಎಸ್.ಸಿ.
ವೇತನ ಶ್ರೇಣಿ : ರೂ. 14550-26700
ಒಟ್ಟು ಹುದ್ದೆಗಳು : 02

11. ಹುದ್ದೆಯ ಹೆಸರು : ಮಾರುಕಟ್ಟೆ ಸಹಾಯಕರು ದರ್ಜೆ- II
ವಿದ್ಯಾರ್ಹತೆ : ಬಿ.ಬಿ.ಎಂ ಅಥವಾ ಬಿ.ಕಾಂ. ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. DCBM ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವೇತನ ಶ್ರೇಣಿ : ರೂ. 14550-26700
ಒಟ್ಟು ಹುದ್ದೆಗಳು : 01

12. ಹುದ್ದೆಯ ಹೆಸರು : ಲೆಕ್ಕ ಸಹಾಯಕರು ದರ್ಜೆ- II
ವಿದ್ಯಾರ್ಹತೆ : ಬಿ.ಕಾಂ.
ವೇತನ ಶ್ರೇಣಿ : ರೂ. 14550-26700
ಒಟ್ಟು ಹುದ್ದೆಗಳು : 01

13. ಹುದ್ದೆಯ ಹೆಸರು : ಕಿರಿಯ ತಾಂತ್ರಿಕರು
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.+ ಐ.ಟಿ.ಐ. ( MRAC/ಫಿಟ್ಟರ್/ಎಲೆಕ್ಟ್ರಿಷಿಯನ್ ) ಮತ್ತು ಕೋ ಆಪರೇಟಿವ್ ಡೈರಿಯಲ್ಲಿ 2 ವರ್ಷದ ಅನುಭವ.
ವೇತನ ಶ್ರೇಣಿ : ರೂ. 11600-20100
ಒಟ್ಟು ಹುದ್ದೆಗಳು : 10

ವಿದ್ಯಾರ್ಹತೆ : SSLC + First Grade Boiler Attendant Certificate of Competency from Karnataka Govt ಅಥವಾ ತತ್ಸಮಾನ ವಿದ್ಯಾರ್ಹತೆ. ಅದರೊಂದಿಗೆ ಸಹಕಾರಿ ಡೈರಿಯಲ್ಲಿ ಎರಡು ವರ್ಷಗಳ ಅನುಭವವಿರಬೇಕು.
ವೇತನ ಶ್ರೇಣಿ : ರೂ. 11600-20100
ಒಟ್ಟು ಹುದ್ದೆಗಳು : 01

 

ವಯೋಮಿತಿ :
1. ಕನಿಷ್ಟ ವಯಸ್ಸು : 18 ವರ್ಷಗಳು
2. ಗರಿಷ್ಟ ವಯಸ್ಸು :

 • ಸಾಮಾನ್ಯ : 35 ವರ್ಷಗಳು
 • 2ಎ, 2ಬಿ, 3ಎ, 3ಬಿ : 38 ವರ್ಷಗಳು
 • ಎಸ್.ಸಿ/ಎಸ್.ಟಿ, ವರ್ಗ-1 : 40 ವರ್ಷಗಳು
 • ಅಂಗವಿಕಲ ಹಾಗೂ ವಿಧವೆಯರಿಗೆ : ಗರಿಷ್ಟ 10 ವರ್ಷಗಳ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ :

 • ಎಸ್.ಸಿ/ಎಸ್.ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ. 200
 • ಇತರರಿಗೆ : ರೂ. 400
 • “Managing Director, Dakshina Kannda Co-operative Milk Producers Union Ltd., Mangalore Dairy Compound, Kulashekara, Mangalore – 575005” ಇವರ ಹೆಸರಿನಲ್ಲಿ ಮಂಗಳೂರಿನಲ್ಲಿ ಸಂದಾಯವಾಗುವಂತೆ ಪಡೆದ ಕ್ರಾಸ್ ಮಾಡಿದ ಡಿ.ಡಿ.ಯನ್ನು ಅರ್ಜಿಯ ಜೊತೆ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

 • DKMUL ನೇಮಕಾತಿಗೆ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.(ಕೆಳಗೆ ‘ಕೊಂಡಿ’ಯಲ್ಲಿ ಅರ್ಜಿ ಇದೆ)
 • ನಿಗದಿತ ಅರ್ಜಿ ನಮೂನೆಯಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟವಾಗಿ ಬರೆಯಬೇಕು ಅಥವಾ ಕಂಪ್ಯೂಟರ್ ಮುದ್ರಣ ಮಾಡಿಸಬೇಕು.
  ಡಿ.ಡಿ.ಯನ್ನು ಮತ್ತು ಅಗತ್ಯವಿರುವ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಸ್ವತಃ ಧೃಡೀಕರಿಸಿ (self attested) ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
 • “Managing Director, Dakshina Kannada Co-operative Milk Producers Union Ltd., Mangalore Dairy Compound, Kulashekara, Mangalore – 575005 ಈ ವಿಳಾಸಕ್ಕೆ ಕಳುಹಿಸಿ.

ಮುಖ್ಯವಾದ ದಿನಾಂಕಗಳು :
ಭರ್ತಿ ಮಾಡಿದ ಅರ್ಜಿ ತಲುಪಲು ಕೊನೆಯ ದಿನಾಂಕ : 29.01.2016

 

ಅಧಿಕೃತ ಕೊಂಡಿಗಳು :