ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕ.ರಾ.ರ.ಸಾ.ನಿ. ನೇಮಕಾತಿ 2016 ರ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳತಕ್ಕದ್ದು. ಆಯ್ಕೆ ಹೊಂದಿದ ಅಭ್ಯರ್ಥಿಗಳನ್ನು ಕ.ರಾ.ರ.ಸಾ.ನಿಗಮದ ವ್ಯಾಪ್ತಿಯಲ್ಲಿ ಬರುವ ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು/ಹಾಸನ, ಬೆಂಗಳೂರು ಕೇಂದ್ರೀಯ, ರಾಮನಗರ, ಮಂಡ್ಯ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಗಳೂರು, ಪುತ್ತೂರು ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಚೇರಿ/ಘಟಕಗಳಿಗೆ ನಿಯೋಜಿಸಬಹುದಾಗಿರುತ್ತದೆ.

 

ಖಾಲಿ ಇರುವ ಹುದ್ದೆಗಳ ವಿವರ :
1. ಹುದ್ದೆಯ ಹೆಸರು : ಸಹಾಯಕ ಲೆಕ್ಕಿಗ
ವಿದ್ಯಾರ್ಹತೆ : ಬಿ.ಕಾಂ.ನಲ್ಲಿ ಮೂರು ವರ್ಷದ ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : ರೂ. 13300-25000
ಒಟ್ಟು ಹುದ್ದೆಗಳು : 71

2. ಹುದ್ದೆಯ ಹೆಸರು : ಸಹಾಯಕ ಸಂಚಾರ ನಿರೀಕ್ಷಕ
ವಿದ್ಯಾರ್ಹತೆ : ಪದವಿಪೂರ್ವ (ಪಿ.ಯು.ಸಿ.) ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ವೇತನ ಶ್ರೇಣಿ : ರೂ. 12410-19180
ಒಟ್ಟು ಹುದ್ದೆಗಳು : 128

3. ಹುದ್ದೆಯ ಹೆಸರು : ಸಹಾಯಕ ಉಗ್ರಾಣ ರಕ್ಷಕ
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಅಟೋಮೊಬೈಲ್ ನಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು.
ವೇತನ ಶ್ರೇಣಿ : ರೂ. 13300-25000
ಒಟ್ಟು ಹುದ್ದೆಗಳು : 34

4. ಹುದ್ದೆಯ ಹೆಸರು : ಅಂಕಿ ಅಂಶ ಸಹಾಯಕ
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಖ್ಯಾಶಾಸ್ತ್ರ ಅಥವಾ ಬಿ.ಸಿ.ಎ. ಅಥವಾ ಬಿ.ಎಸ್.ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ವರ್ಷದ ಪದವಿ ಪೂರೈಸಿರಬೇಕು ಮತ್ತು ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : ರೂ. 13300-25000
ಒಟ್ಟು ಹುದ್ದೆಗಳು : 41

 

ವಯೋಮಿತಿ : 04.02.2016 ರರೊಳಗೆ
1. ಕನಿಷ್ಟ ವಯಸ್ಸು : 18 ವರ್ಷಗಳು ಪೂರ್ಣಗೊಂಡಿರಬೇಕು.
2. ಗರಿಷ್ಟ ವಯಸ್ಸು :

  • ಸಾಮಾನ್ಯ : 35 ವರ್ಷಗಳು
  • 2ಎ, 2ಬಿ, 3ಎ, 3ಬಿ : 38 ವರ್ಷಗಳು
  • ವರ್ಗ-1, ಎಸ್.ಸಿ/ಎಸ್.ಟಿ : 40 ವರ್ಷಗಳು

ಶುಲ್ಕದ ವಿವರ :

  • ಎಸ್.ಸಿ/ಎಸ್.ಟಿ, ವರ್ಗ-1 , ಮಾಜಿ ಸೈನಿಕ ಮತ್ತು ಅವಲಂಬಿತರಿಗೆ: ರೂ. 200
  • ಇತರರಿಗೆ : ರೂ. 400

ಗಮನಿಸಿ : ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ನಿಗದಿಪಡಿಸಿರುವ ಮೊತ್ತವನ್ನು ಕೂಡಿಸಿ ಒಟ್ಟು ಹಣದ ಮೊತ್ತವನ್ನು ಒಂದೇ ಚಲನ್ ನಲ್ಲಿ ಪಾವತಿ ಮಾಡಬೇಕು. ( ಉದಾಹರಣೆಗೆ: ಒಬ್ಬ ಸಾಮಾನ್ಯ ವರ್ಗದ ಅಭ್ಯರ್ಥಿ ಒಂದೇ ಅರ್ಜಿಯಲ್ಲಿ ಮೂರು ಹುದ್ದೆಗಳನ್ನು ಆಯ್ಕೆ ಮಾಡಿದಲ್ಲಿ ರೂ. 1200 ರ ಮೊತ್ತವನ್ನು ಚಲನ್ ನಲ್ಲಿ ನಮೂದಿಸತಕ್ಕದ್ದು.) ಅರ್ಜಿ ಶುಲ್ಕವನ್ನು ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ( Computerized Post Offices Only ) ಮಾತ್ರ ಇ-ಪೇಮೆಂಟ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ.

ಮುಖ್ಯವಾದ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ : 14.01.2016
  • ಆನ್ ಲೈನ್ ನೋಂದಣಿಗೆ ಕೊನೆಯ ದಿನಾಂಕ : 04.02.2016 ರ ಸಂಜೆ 5.30 ಗಂಟೆ.
  • ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 06.02.2016

 

ಅಧಿಕೃತ ಕೊಂಡಿಗಳು :