ಬೀಡಿ ಸ್ಕಾಲರ್ ಷಿಪ್, ಎಸ್.ಟಿ. ಸ್ಕಾಲರ್ ‍ಷಿಪ್,  ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರಿಮೆಟ್ರಿಕ್/ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಗಳ ಆನ್-ಲೈನ್ ಅರ್ಜಿ ಸಲ್ಲಿಸುವಿಕೆ ನವಂಬರ 30ರಂದು ಕೊನೆಗೊಂಡಿದ್ದು, ಶಾಲಾ/ಕಾಲೇಜು ಮಟ್ಟದಲ್ಲಿ ಪರಿಶೀಲನೆ ಪ್ರಗತಿಯಲ್ಲಿದೆ. ಆದರೆ ಇನ್ನೂ ಹಲವಾರು ಅರ್ಜಿಗಳು ಪರಿಶೀಲನೆಗೊಳ್ಳದೇ ವಿದ್ಯಾರ್ಥಿಗಳ ಅರ್ಜಿಗಳು ಜಿಲ್ಲಾಮಟ್ಟಕ್ಕೆ ತಲುಪದೆ, ಶಾಲೆ/ಕಾಲೇಜು ಮಟ್ಟದಲ್ಲಿಯೇ ಬಾಕಿಯಾಗಿರುವುದು ಆತಂಕ ಪಡಬೇಕಾದ ವಿಚಾರ.

ಪರಿಶೀಲನೆಯ ಮಾರ್ಗದರ್ಶಿ:

ಶಾಲೆ/ಕಾಲೇಜು ಮಟ್ಟದ ಪರಿಶೀಲನೆ >> ಜಿಲ್ಲಾ ಮಟ್ಟದ ಪರಿಶೀಲನೆ >> ರಾಜ್ಯ ಮಟ್ಟದ ಪರಿಶೀಲನೆ

ವಿದ್ಯಾರ್ಥಿಗಳು (ಅಥವಾ ಪೋಷಕರು) ಏನು ಮಾಡಬಹುದು?

  1. ವಿದ್ಯಾರ್ಥಿಗಳು ಆನ್-ಲೈನ್ ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದಿಗೆ ಪೂರಕ ದಾಖಲಾತಿಗಳನ್ನು ಶಾಲೆ/ಕಾಲೇಜಿನ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರಿಗೆ ಸಲ್ಲಿಸುವುದು.
  2. www.scholarships.gov.in ಗೆ ಲಾಗಿನ್ ಆಗಿ ಸ್ಟೇಟಸ್ ಚೆಕ್ ಮಾಡಿಕೊಂಡು, ಅರ್ಜಿಯು ಯಾವ ಹಂತದಲ್ಲಿದೆ ಎಂಬುವುದನ್ನು ತಿಳಿದುಕೊಳ್ಳುವುದು. ‘ಅಪ್ಲಿಕೇಶನ್ ಪೆಂಡಿಂಗ್ ಎಟ್ ಇನ್ಸ್ಟಿಟ್ಯೂಟ್ ಲೆವೆಲ್’ ಎಂಬ ಸಂದೇಶವಿದ್ದರೆ, ಸಂಬಂಧಿಸಿದ ಶಾಲೆ/ಕಾಲೇಜಿನ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರನ್ನು ಕೂಡಲೇ ಸಂಪರ್ಕಿಸಿ ಅರ್ಜಿಯನ್ನು ಪರಿಶೀಲಿಸಿ ಜಿಲ್ಲಾ ಮಟ್ಟಕ್ಕೆ ಪರಿಶೀಲನೆಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಳ್ಳುವುದು.

ಶಾಲೆ/ಕಾಲೇಜಿನ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರು ಏನು ಮಾಡಬಹುದು?

  1. ವಿದ್ಯಾರ್ಥಿಗಳಿಂದ ಆನ್-ಲೈನ್ ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದಿಗೆ ಲಗತ್ತಿಸಿರುವ ಪೂರಕ ದಾಖಲಾತಿಗಳನ್ನು ಪಡೆದು ಆನ್-ಲೈನ್ ನಲ್ಲಿಯೇ ಪರಿಶೀಲಿಸಿ ಸರಿಯಿದ್ದರೆ, ಮುಂದಿನ ಹಂತಕ್ಕೆ ಕಳುಹಿಸಿಕೊಡುವುದು. ಸಲ್ಲಿಸಿರುವ ಅರ್ಜಿಯಲ್ಲಿ ತಪ್ಪುಗಳೇನಾದರೂ ಇದ್ದರೆ, ಅರ್ಜಿಯನ್ನು ಸೂಕ್ತ ಕಾರಣ ನೀಡಿ “ಡಿಫೆಕ್ಟ್” ಮಾಡಿ, ವಿದ್ಯಾರ್ಥಿಗಳಿಗೆ ಅರ್ಜಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿ ಮರುಪರಿಶೀಲನೆಗೆ ಒಪ್ಪಿಸಲು ಅನುವು ಮಾಡಿಕೊಡುವುದು. (ಈ ಅವಕಾಶ ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಮಾತ್ರ ಲಭ್ಯವಿರುವುದು.)
  2. ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರು ಸಹಾಯಕ್ಕಾಗಿ ಸಂಬಂಧಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಅಥವಾ ಕ್ಷೇತ್ರ ಸಂಪನ್ಮೂಲ ಕೇಂದ್ರ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ‘ಕ್ರಸ್ಟ್’ ಪುತ್ತೂರು ಸಂಸ್ಥೆಯನ್ನು 9901520223 ರಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.