ಜಿಲ್ಲಾ ನಗರಾಭಿವೃಧ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಾಮರಾಜನಗರ ಸಂಖ್ಯೆ: ಎಂಯುಎನ್(ಜಿನಅಕೋ) 388/2006-07 ಖಾಲಿ ಇರುವ 3 ಅಕೌಂಟೆಂಟ್/ಅಕೌಂಟಿಂಗ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

 

ಖಾಲಿ ಇರುವ ಹುದ್ದೆಗಳ ವಿವರ:

ಒಟ್ಟು ಹುದ್ದೆಗಳು: 3

 1. ನಗರಸಭೆ, ಕೊಳ್ಳೇಗಾಲ: 01
 2. ಪುರಸಭೆ, ಗುಂಡ್ಲುಪೇಟೆ: 01
 3. ಪಟ್ಟಣ ಪಂಚಾಯಿತಿ, ಹನೂರು: 01

 

ವಿದ್ಯಾರ್ಹತೆ:

ಅಭ್ಯರ್ಥಿಯು ಬಿಕಾಂ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.  (ಶೇಕಡಾವಾರು ಅಂಕಗಳನ್ನು ಎಲ್ಲಾ ವರ್ಷ/ಸೆಮಿಸ್ಟರ್ಗಳನ್ನು ಸೇರಿಸಿ ಲೆಕ್ಕಿಸುವುದು.)

 

ವೇತನ/ಕನ್ಸಲ್ ಟೆನ್ಸಿ ಶುಲ್ಕ: 8000-1000-9000-7.5%

 

ಮೀಸಲಾತಿ:

 1. ಪರಿಶಿಷ್ಟ ಜಾತಿ: 01
 2. ಪರಿಶಿಷ್ಟ ಪಂಗಡ: 01
 3. ಸಾಮಾನ್ಯ ಅಭ್ಯರ್ಥಿ: 01

 

ಅರ್ಜಿ ನಮೂನೆ/ಅಧಿಸೂಚನೆ:

 1. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಹಾಗೂ ನೇಮಕಾತಿ ಅಧಿಸೂಚನೆಯನ್ನು ಜಿಲ್ಲಾ ನಗರಾಭಿವೃಧ್ದಿ ಕೋಶ ಕಛೇರಿಯಲ್ಲಿ ಪಡೆಯಬಹುದು. ಅಥವಾ
 2. ಚಾಮರಾಜನಗರ ಜಿಲ್ಲಾ ನಗರಾಭಿವೃಧ್ದಿ ಮತ್ತು ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವೆಬ್ ಸೈಟ್ ಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
 3. ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ನಿಗದಿತ ಸ್ಥಳದಲ್ಲಿ ಸಹಿ ಮಾಡಿರತಕ್ಕದ್ದು.
 4. ಅರ್ಜಿ ನಮೂನೆ ಹಾಗೂ ಅಧಿಸೂಚನೆಗಾಗಿ ವೆಬ್ ಸೈಟ್ ವಿಳಾಸ ಕೆಳಗೆ ಇದೆ.

 

ದಾಖಲಾತಿಗಳು:

ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ಧೃಢೀಕರಿಸಿ ಸಲ್ಲಿಸತಕ್ಕದ್ದು.

 1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
 2. ಪಿಯುಸಿ ಅಂಕಪಟ್ಟಿ (ಲಭ್ಯವಿದ್ದಲ್ಲಿ)
 3. ಪದವಿಯ ಎಲ್ಲಾ ಸೆಮಿಸ್ಟರ್/ವರ್ಷಗಳ ಅಂಕಪಟ್ಟಿಗಳು
 4. ಪದವಿ ಘಟಿಕೋತ್ಸವ ಪ್ರಮಾಣಪತ್ರ (ಲಭ್ಯವಿದ್ದಲ್ಲಿ)
 5. ಸೇವಾ ಅನುಭವ ಪ್ರಮಾಣಪತ್ರಗಳು (ಲಭ್ಯವಿದ್ದಲ್ಲಿ)

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-10-2015

ಸಹಾಯವಾಣಿ ಸಂಖ್ಯೆ: -08226-223761

 

ಅರ್ಜಿ ಸಲ್ಲಿಸುವ ವಿಧಾನ:

 1. ಅಭ್ಯರ್ಥಿಯು ಭರ್ತಿ ಮಾಡಿದ ನಿಗಧಿತ ಅರ್ಜಿಯೊಂದಿಗೆ ಸೂಚಿಸಿರುವ ಎಲ್ಲಾ ಪ್ರಮಾಣಪತ್ರಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ “ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಚಾಮರಾಜನಗರ” ಈ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತಲುಪುವಂತೆ ನೋಂದಾಯಿತ ಅಂಚೆ (Registered Post) ಮೂಲಕ ಸಲ್ಲಿಸುವುದು.
 2. ಅಂಚೆ ಕವರಿನ ಮೇಲೆ “ಅಕೌಂಟೆಂಟ್/ಅಕೌಂಟಿಂಗ್ ಕನ್ಸಲ್ ಟೆಂಟ್ ಹುದ್ದೆಗಾಗಿ ಅರ್ಜಿ ಅಧಿಸೂಚನೆ ಸಂಖ್ಯೆ: ಎಮ್ ಯು ಎನ್ (ಜಿನಅಕೋ) 388/2006-07, Category ————-ಎಂದು ನಮೂದಿಸತಕ್ಕದ್ದು.

 

ನೇಮಕಾತಿ ವಿಧಾನ:

 1. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ
 2. ಸ್ಪರ್ಧಾತ್ಮಕ ಪರೀಕ್ಷಾ ವಿಧಾನ:
 • ಈ ಪರೀಕ್ಷೆಯು ಒಂದು ಪತ್ರಿಕೆಯನ್ನೊಳಗೊಂಡಿದ್ದು ವಸ್ತು ನಿಷ್ಟ ಆಯ್ಕೆ(Objective Multiple Choice) ಮಾದರಿಯದಾಗಿರುತ್ತದೆ. (Accountancy/Commerce/Business Studies ಸಂಬಂಧಪಟ್ಟ ಪ್ರಶ್ನೆಗಳು-100 ಅಂಕಗಳು)
 • ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆಡರಲ್ಲೂ ಇರುತ್ತವೆ.
 • ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 100 ಅಂಕಗಳಿಗೆ ಪಡೆದ ಒಟ್ಟು ಅಂಕಗಳನ್ನು 75 ಅಂಕಗಳಿಗೆ ಪರಿವರ್ತಿಸಿ, ಅರ್ಹತಾ ಪರೀಕ್ಷೆಯಲ್ಲಿ (ಬಿಕಾಂ) ಪಡೆದ ಶೇಕಡಾವಾರು ಅಂಕಗಳನ್ನು ಶೇಕಡಾ 25 ಕ್ಕೆ ಪರಿವರ್ತಿಸಿ, ಒಟ್ಟು 100 ಅಂಕಗಳಿಗೆ ಮೆರಿಟ್ ಪಟ್ಟಿಯನ್ನು ತಯಾರಿಸಿ, ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕಾತಿಯನ್ನು ಮಾಡಲಾಗುತ್ತದೆ.
 • ಸ್ಪರ್ಧಾತ್ಮಕ (ಲಿಖಿತ) ಪರೀಕ್ಷೆಯಲ್ಲಿ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ( Document Verification) ಗೆ ಕರೆಯಲಾಗುವುದು.
 • ನೇಮಕಾತಿ/ಆಯ್ಕೆ ಪ್ರಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಚಾಮರಾಜನಗರ ಇವರೇ ಆಗಿರುತ್ತಾರೆ. ಆದುದರಿಂದ ನೇಮಕಾತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ ಹಾಗೂ ನೇಮಕಾತಿ ಪ್ರಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.

 

ಆಯೋಗದೊಡನೆ ಪತ್ರ ವ್ಯವಹಾರ:

ಸಂದರ್ಶನಕ್ಕೆ ಅನುಮತಿಸಲಾದ (ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ) ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳು ತಲುಪದಿದ್ದಲ್ಲಿ ಸಂದರ್ಶನ/ಮೂಲ ದಾಖಲಾತಿಯ ಪರಿಶೀಲನೆಗೆ ಸೂಚನಾ ಪತ್ರದ ನಕಲನ್ನು ನೀಡಲಾಗುವುದು. ವಿಳಾಸ ಬದಲಾವಣೆ ಇದ್ದಲ್ಲಿ ಮಾತ್ರ ಅಭ್ಯರ್ಥಿಗಳು ಆಯೋಗದ ಗಮನಕ್ಕೆ ತರತಕ್ಕದ್ದು. ಈ ಸಂದರ್ಭದಲ್ಲಿ ತಮ್ಮ ಮನವಿಯಲ್ಲಿ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರಬೇಕು.

 1. ಹುದ್ದೆ/ವಿಷಯದ ಹೆಸರು
 2. ಅಭ್ಯರ್ಥಿಯ ಪೂರ್ಣ ಹೆಸರು (ಬಿಡಿ ಅಕ್ಷರಗಳಲ್ಲಿ)
 3. ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸ

 

ಅಧಿಕೃತ ಕೊಂಡಿಗಳು:

 1. ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ
 2. ಅಧಿಕೃತ ನೇಮಕಾತಿ ಅಧಿಸೂಚನೆ