ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಖಾಲಿ ಇರುವ ಬೋಧಕೇತರ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ನಾಗರೀಕರಿಂದ ನಿಗದಿಪಡಿಸಿದ ನಮೂನೆಯ ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

VIJAYANAGARA SRI KRISHNADEVARAYA UNIVERSITY, BALLARY Recruitment 2019-20 : Application invited for the posts of NON TEACHING GROUP A, GROUP B and GROUP C in VSKUB.

Job Searching Keywords : Karnataka Govt. Jobs, Karnataka Jobs, VSKUB Recruitment, VSKUB notification 2019, Non Teaching post, Non Teaching Jobs in VSKUB, Vijayanagara Sri Krishnadevaraya University ballary recruitment, Vijayanagara Sri Krishnadevaraya University notification 2019, Vijayanagara Sri Krishnadevaraya University non teaching posts in ballary.

 

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆಯ ಹೆಸರು ಖಾಲಿ ಹುದ್ದೆ ವಿದ್ಯಾರ್ಹತೆ ವೇತನಶ್ರೇಣಿ

(ರೂ.ಗಳಲ್ಲಿ)

ಗ್ರೂಪ್ ‘ಎ’ : ಒಟ್ಟು 05 ಹುದ್ದೆಗಳು
1. ಉಪ-ಕುಲಸಚಿವರು 01

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ಅಪೇಕ್ಷಣೀಯ : ಆಡಳಿತಾತ್ಮಕ / ಶೈಕ್ಷಣಿಕ ವಿಭಾಗದಲ್ಲಿ ಸರಕಾರಿ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಸೇವಾ ಅನುಭವವಿರಬೇಕು.

ರೂ.67550 – ರೂ.104600
2. ಸಹಾಯಕ-ಕುಲಸಚಿವರು 02

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ಅಪೇಕ್ಷಣೀಯ :  ಆಡಳಿತಾತ್ಮಕ ವಿಭಾಗದಲ್ಲಿ ಸರಕಾರಿ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಸೇವಾ ಅನುಭವವಿರಬೇಕು. ಮತ್ತು ಅಸಿಸ್ಟೆಂಟ್ ರಿಜಿಸ್ಟ್ರಾರ್ ಗಳು ಎಸ್‍ಎಎಸ್ ನಲ್ಲಿ ಅಕೌಂಟ್ಸ್ ತೇರ್ಗಡೆಯಾಗಿರಬೇಕು.

ರೂ.52650 – ರೂ.97100
3. ಸಹಾಯಕ ಗ್ರಂಥಪಾಲಕರು 02 ಯುಜಿಸಿ ಅನ್ವಯದಂತೆ ರೂ.15600 – ರೂ.39100+6000 (ಎಜಿಪಿ)
ಗ್ರೂಪ್  ‘ಬಿ’ : ಒಟ್ಟು 05 ಹುದ್ದೆಗಳು
4. ಕಛೇರಿ ಅಧೀಕ್ಷಕರು 02

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು ಮತ್ತು ಎಸ್ಎಎಸ್ ಪರೀಕ್ಷೆಯಲ್ಲಿ  ಅಕೌಂಟ್ಸ್ ತೇರ್ಗಡೆಯಾಗಿರಬೇಕು.

ಅಪೇಕ್ಷಣೀಯ :  ಸರಕಾರಿ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 03 ವರ್ಷಗಳ ಸೇವಾ ಅನುಭವವಿರಬೇಕು.

ರೂ.43100 – ರೂ.83900
5. ಸಹಾಯಕ ಗ್ರಂಥಪಾಲಕರು ಗ್ರೇಡ್-II 01

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲೈಬ್ರರಿ ಇನ್ಫರ್ಮೇಷನ್ ಸೈನ್ಸ್ ಪದವಿಯನ್ನು ಹೊಂದಿರಬೇಕು.

ಅಪೇಕ್ಷಣೀಯ : ಲೈಬ್ರರಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ 2 ವರ್ಷಗಳ ಅನುಭವ ಹೊಂದಿದವರಿಗೆ ಆದ್ಯತೆ.

ರೂ.43100 – ರೂ.83900
6. ಕಂಪ್ಯೂಟರ್ ಇಂಜಿನಿಯರ್ 01 ಕಂಪ್ಯೂಟರ್ ಇಂಜಿನಿಯರಿಂಗ್, ಬಿ.ಇ (ಸಿ.ಎಸ್.ಇ / ಐಎಸ್ಇ / ಐಟಿ) ಪದವಿಯನ್ನು ಹೊಂದಿರಬೇಕು. ರೂ.43100 – ರೂ.83900
7. ಸಹಾಯಕ ಇಂಜಿನಿಯರ್ 01 ಇಂಜಿನಿಯರಿಂಗ್ ಪದವಿಯಲ್ಲಿ (ಸಿವಿಲ್ / ಇಲೆಕ್ಟ್ರಿಕಲ್ / ಮೆಕ್ಯಾನಿಕಲ್) ತೇರ್ಗಡೆ ರೂ.43100 – ರೂ.83900
ಗ್ರೂಪ್ ‘ಸಿ’ : ಒಟ್ಟು 45 ಹುದ್ದೆಗಳು
8. ಕಂಪ್ಯೂಟರ್ ಟೆಕ್ನಿಷಿಯನ್ 01 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ / ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾವನ್ನು ಹೊಂದಿರಬೇಕು. ಡಿಪ್ಲೊಮಾ (ಸಿಎಸ್ / ಐಎಸ್ / ಐಟಿ / ಇಇಸಿ) ರೂ.40900 – ರೂ.78200

 

9. ಸಹಾಯಕ ಕಛೇರಿ ಅಧೀಕ್ಷಕ 01

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಸರಕಾರಿ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 03 ವರ್ಷಗಳ ಆಡಳಿತಾತ್ಮಕ  ಸೇವಾ ಅನುಭವವಿರಬೇಕು.

ರೂ.37900 – ರೂ.70850
10. ಡ್ರಾಫ್ಟ್ ಮೆನ್ 01 ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಮಾಡಿರಬೇಕು. ಡ್ರಾಫ್ಟ್ಸ್ ಮೆನ್ ಆದ್ಯತೆಯ ಸಂದರ್ಭದಲ್ಲಿ ಡ್ರಾಫ್ಟ್ಸ್ ಮೆನ್ ವಿಭಾಗದಲ್ಲಿ ಬಿಇ (ಸಿವಿಲ್) ಮಾಡಿರಬೇಕು. ರೂ.33450 – ರೂ.62600
11. ಸೀನಿಯರ್ ವರ್ಕ್ ಇನ್ಸ್ ಪೆಕ್ಟರ್ 02 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು. ರೂ.33450 – ರೂ.62600
12. ಶೀಘ್ರ ಲಿಪಿಗಾರರು 02

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು.

ಅಪೇಕ್ಷಣೀಯ: ಇಂಗ್ಲೀಷ್ / ಕನ್ನಡ ಭಾಷೆಯಲ್ಲಿ ಹಿರಿಯ ಶೀಘ್ರಲಿಪಿಯಲ್ಲಿ ತೇರ್ಗಡೆಯಾಗಿರಬೇಕು.

ರೂ.30350 – ರೂ.58250
13. ಪ್ರಥಮ ದರ್ಜೆ ಸಹಾಯಕರು 15 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು. ರೂ.30350 – ರೂ.58250
14. ಸ್ಟೋರ್ ಕೀಪರ್ 01 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರಬೇಕು. ರೂ.30350 – ರೂ.58250
15. ಲ್ಯಾಬ್ ಅಸಿಸ್ಟೆಂಟ್ 02 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದಲ್ಲಿ ಪದವಿ ಮಾಡಿರಬೇಕು ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ ಆಧ್ಯತೆ ನೀಡಲಾಗುವುದು. ರೂ.30350 – ರೂ.58250
16. ದ್ವಿತೀಯ ದರ್ಜೆ ಸಹಾಯಕರು 15

ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ.

ಕಂಪ್ಯೂಟರ್ ಜ್ಞಾನ ಮತ್ತು ಉನ್ನತ ವಿದ್ಯಾರ್ಹತೆ ಪಡೆದವರಿಗೆ ಆಧ್ಯತೆ ನೀಡಲಾಗುವುದು.

ರೂ.21400 – ರೂ.42000
17. ಬೆರಳಚ್ಚುಗಾರರು 04

ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ.

ಅಪೇಕ್ಷಣೀಯ: ಇಂಗ್ಲೀಷ್ / ಕನ್ನಡದಲ್ಲಿ ಹಿರಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ರೂ.21400 – ರೂ.42000
18. ವಾಹನ ಚಾಲಕರು 01

ಎಸ್‍ಎಸ್‍ಎಲ್‍ಸಿ ಮತ್ತು ತತ್ಸಮಾನ ವಿದ್ಯಾರ್ಹತೆ ಮತ್ತು ಲಘು ಮತ್ತು ಭಾರಿ ವಾಹನಗಳ ಲೈಸನ್ಸ್ (ವಾಹನ ಪರವಾನಗಿ)ಹೊಂದಿರಬೇಕು

ಅಪೇಕ್ಷಣೀಯ: 3 ವರ್ಷಗಳ ಅನುಭವವಿರಬೇಕು.

ರೂ.21400 – ರೂ.42000

ವಯೋಮಿತಿ :

  1. ಕನಿಷ್ಠ : 18 ವರ್ಷ
  2. ಗರಿಷ್ಠ : (17.04.2017)
    1. ಸಾಮಾನ್ಯ ವರ್ಗ : 35 ವರ್ಷ
    2. ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
    3. ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ

 

ಅರ್ಜಿ ಶುಲ್ಕ :

  1. ಪ.ಜಾತಿ, ಪ.ಪಂಗಡ ಹಾಗೂ  ಪ್ರವರ್ಗ-1 ರ ಅಭ್ಯರ್ಥಿಗಳಿಗೆ : ರೂ.200
  2. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ.500
  • ಸೂಚನೆ : ಶುಲ್ಕವನ್ನು ಡಿ.ಡಿ ಮೂಲಕ ‘ಹಣಕಾಸು ಅಧಿಕಾರಿಗಳು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ’ ಇವರ ಹೆಸರಿಗೆ ಸಲ್ಲಿಸತಕ್ಕದ್ದು.

 

ಪ್ರಮುಖ ದಿನಾಂಕಗಳು :

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06.05.2019
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17.05.2019  ಸಂಜೆ  5.30

 

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಕುಲಸಚಿವರು

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

ಜ್ಞಾನ ಸಾಗರ ಆವರಣ, ವಿನಾಯಕ ನಗರ

ಕಂಟೋನ್ಮೆಂಟ್, ಬಳ್ಳಾರಿ- 583105

 

ಸೂಚನೆಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯ ಜೊತೆಗೆ ವಿದ್ಯಾರ್ಹತೆ ಮತ್ತು ಇತರ ದಾಖಲಾತಿಗಳ ಪ್ರತಿಗಳನ್ನು ಮತ್ತು ಶುಲ್ಕದ ಡಿಡಿ ಯನ್ನು 6*10 ಲಕೋಟೆ(ENVELOP)ಯಲ್ಲಿ ತುಂಬಿಸಿ ಮತ್ತು ಲಕೋಟೆಯ ಮೇಲೆ “ಯಾವ ಹುದ್ದೆಗೆ” ಎಂದು ದಪ್ಪವಾಗಿ ನಮೂದಿಸತಕ್ಕದ್ದು. ಪ್ರತ್ಯೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆ ಅರ್ಜಿಯನ್ನು ಸಲ್ಲಿಸಬೇಕು. ಇತರೆ ಮಾಹಿತಿಗಾಗಿ ಅಧೀಕೃತ ಪ್ರಕಟಣೆಯನ್ನು ನೋಡತಕ್ಕದ್ದು.

 

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

© www.coastalhut.com

Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.

Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.