ಕೋಸ್ಟಲ್ ಹಟ್ ವೆಬ್ ತಾಣವನ್ನು ಸರ್ಕಾರಿ, ಖಾಸಗಿ ಮತ್ತು ಸ್ಥಳೀಯ ಉದ್ಯೋಗವನ್ನು ಅರಸುವ ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತೆ ರೂಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಒಂದೇ ನೆಲೆಯಲ್ಲಿ ಉದ್ಯೋಗದ ಸಂಪೂರ್ಣ ಮಾಹಿತಿಯೊಂದಿಗೆ, ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಜಿ ನಮೂನೆ/ ಆನ್-ಲೈನ್ ಅರ್ಜಿಯ ನೇರ ಕೊಂಡಿಯನ್ನು ಒದಗಿಸಿ, ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಸರಳೀಕರಿಸುವ ಕಾರ್ಯವನ್ನು ಕೋಸ್ಟಲ್ ಹಟ್ ತಂಡವು ಮಾಡಿರುತ್ತದೆ.

ಉದ್ಯೋಗವನ್ನು ಅರಸುತ್ತಿರುವ ಕರ್ನಾಟಕದ ನಿರುದ್ಯೋಗಿಗಳಿಗೆ ಸಹಾಯವಾಗುವಂತೆ ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಕೋಸ್ಟಲ್‍ಹಟ್.ಕಾಂ ತಾಣವನ್ನು ಇಂಗ್ಲೀಷ್ ಹಾಗೂ ಕನ್ನಡ ಅವತರಣಿಕೆಗಳಲ್ಲಿ ಪ್ರಕಟಿಸುತ್ತಾ ಬಂದಿದ್ದು, ಈಗ 5ನೇ ವರ್ಷದ ಸಂಭ್ರಮ.

ಒಬ್ಬ ನಿರುದ್ಯೋಗಿಗೆ ಉದ್ಯೋಗ ಒದಗಿಸಿದರೆ ಆತನ ಪೂರ್ಣ ಕುಟುಂಬಕ್ಕೆ ಸಹಕಾರ ಮಾಡಿದ ಫಲ ದೊರೆಯುವುದರಲ್ಲಿ ಎರಡು ಮಾತಿಲ್ಲ. ಶ್ರೇಷ್ಠ ದಾನಗಳಲ್ಲಿ ಅನ್ನದಾನ ಮೇಲ್ಪಂಕ್ತಿಯಲ್ಲಿದ್ದರೆ, ಅನ್ನವನ್ನು ಸಂಪಾದಿಸಿಕೊಳ್ಳುವ ಉದ್ಯೋಗದ ಮಾಹಿತಿಯನ್ನು/ಉದ್ಯೋಗವನ್ನು ಕೊಡಿಸುವುದು ಅದಕ್ಕಿಂತಲೂ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ ಸೇವೆಯನ್ನು ಈ ತಾಣವು ಮಾಡುತ್ತಾ ಬಂದಿದೆ ಎಂದರೆ ನಮ್ಮ ತಂಡದ ಶ್ರಮ ಮಾತ್ರವಲ್ಲದೇ ಅದರೊಂದಿಗೆ ಅದರ ಸೇವೆಯನ್ನು ಬಳಸಿಕೊಂಡ ಉದ್ಯೋಗಾಕಾಂಕ್ಷಿಗಳು ಹಾಗೂ ಪ್ರೋತ್ಸಾಹಿಸಿದ ಎಲ್ಲರ ಪಾತ್ರವೂ ಅತ್ಯಂತ ಮಹತ್ವಪೂರ್ಣವಾಗಿರುವಂತಾದ್ದಾಗಿರುತ್ತದೆ.

ಕೋಸ್ಟಲ್ ಹಟ್ ಡಾಟ್ ಕಾಂ” ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಕಾರ್ಯಾಚರಿಸುತ್ತಿದ್ದು, ವೆಬ್ ಡಿಸೈನ್ ಮತ್ತು ವೆಬ್ ಡೆವಲಪ್ ಮೆಂಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್ಮೆಂಟ್  ಸಂಸ್ಥೆಯು ಇದರ ವಿನ್ಯಾಸ, ಹೋಸ್ಟಿಂಗ್, ಎಸ್ಇಒ (ಪ್ರಚಾರ) ಮತ್ತು ಸಂಪೂರ್ಣ ನಿರ್ವಹಣೆಯನ್ನು ಮಾಡುತ್ತಿದೆ.

ನಮ್ಮೊಂದಿಗೆ ಕೈಜೋಡಿಸಿ: ಸದ್ರಿ ವೆಬ್‍ತಾಣವನ್ನು ನಿರ್ವಹಿಸಲು ವಾರ್ಷಿಕವಾಗಿ ಅಂದಾಜು ರೂ.60000 ದಿಂದ ರೂ.75000 ಖರ್ಚು ತಗಲುತ್ತಿದ್ದು ಯಾವುದೇ ಫಲಾಪೇಕ್ಷೆಯಿಲ್ಲದೇ ಸ್ವಂತ ಹಣಕಾಸಿನಿಂದ ನಿರ್ವಹಿಸಲಾಗುತ್ತಿದೆಯಾದರೂ, ಏರುತ್ತಿರುವ ವೆಚ್ಚಗಳಿಂದ ಈ ವೆಬ್‍ತಾಣವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ತ್ರಾಸದಾಯಕವಾಗಿರುತ್ತದೆ. ಈ ಬಗ್ಗೆ ಆಸಕ್ತ ದಾನಿಗಳು ಸಾಮಾಜಿಕ ಕಳಕಳಿಯ ನಮ್ಮ ಸೇವೆಯಲ್ಲಿ ತೊಡಗಿಕೊಳ್ಳಲು ಇಚ್ಚೆಪಟ್ಟಲ್ಲಿ ಇಲ್ಲಿ ಕ್ಲಿಕ್ಕಿಸಿ ಯಾವುದೇ ಮೊತ್ತದ ದೇಣಿಗೆ ನೀಡಬಹುದು.

ಈ ವೆಬ್ ಸೈಟಿನ ಸಂಪೂರ್ಣ ನಿರ್ವಹಣೆ ಮತ್ತು ಹಕ್ಕುಗಳು:

ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್ಮೆಂಟ್

ಪ್ರಥಮ ಮಹಡಿ, ಸೂರ್ಯಪ್ರಭಾ,
ಮುಖ್ಯರಸ್ತೆ, ಪುತ್ತೂರು, ದ.ಕ. ಜಿಲ್ಲೆ – 574201
ವೆಬ್ : www.crustindia.com