ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ “ಡಿ” ಗ್ರೂಪ್ (ಪೌರಕಾರ್ಮಿಕರು /ಲೋಡರ್ಸ್‌) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ Online ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿಗಳನ್ನು ದಿನಾಂಕ: 13.11.2015 ರೊಳಗೆ ಸಲ್ಲಿಸತಕ್ಕದ್ದು .

ಕ್ರ ಸಂ ಹುದ್ದೆಯ ಹೆಸರು ಒಟ್ಟು ಹುದ್ದೆ ಶೈಕ್ಷಣಿಕ ವಿದ್ಯಾರ್ಹತೆ ವೇತನ ಶ್ರೇಣಿ
1 “ಡಿ” ಗ್ರೂಪ್ ಪೌರ ಕಾರ್ಮಿಕ – 33

ಲೋಡರ್ಸ್     – 16

ಒಟ್ಟು            49

10ನೇ ತರಗತಿ (10th Standard Examination conducted by Karnataka Secondary Education Examination Board (KSEEB) or CBSE or ICSE ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಈ ಮೇಲ್ಕಂಡ ವಿದ್ಯಾರ್ಹತೆಯನ್ನು ಹೊರತು ಪಡಿಸಿ ಇನ್ನಿತರ ಯಾವುದೇ ವಿದ್ಯಾರ್ಹತೆಗಳನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.

Physical fitness – as in Railway Kalashi Standards

9600-14550

 

 

 1. ನಗರ ಸ್ಥಳೀಯ ಸಂಸ್ಥೆವಾರು ಹುದ್ದೆಯ ಹಂಚಿಕೆ :
ಕ್ರ,ಸಂ ಸ್ಥಳೀಯ ಸಂಸ್ಥೆಯ ಹೆಸರು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಿರುವ ಪೌರ ಕಾರ್ಮಿಕ ಹುದ್ದೆಗಳು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಿರುವ ಲೋಡರ್ಸ್ ಹುದ್ದೆಗಳು ಒಟ್ಟು
1 2 3 4 5
1 ಉಡುಪಿ ನಗರಸಭೆ 19 11 30
2 ಕಾರ್ಕಳ ಪುರಸಭೆ 2 2
3 ಕುಂದಾಪುರ ಪುರಸಭೆ 5 1 6
4 ಸಾಲಿಗ್ರಾಮ ಪಟ್ಟಣ ಪಂಚಾಯತ್ 7 4 11
  ಒಟ್ಟು 33 16 49

 

 

 1. ಹುದ್ದೆಯ ವರ್ಗೀಕರಣ :
( ರೋಸ್ಟರ್ ಬಿಂದು 01 ರಿಂದ 49 ರವರೆಗೆ)
ಕ್ರ.ಸ. ವರ್ಗೀಕರಣದ ವಿವರ ಇತರ ಅಭ್ಯರ್ಥಿ ಮಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗವಿಕಲರು ಮಾಜಿ ಸೈನಿಕರು ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಪರಿಶಿಷ್ಟ ಜಾತಿ 2 3 2 1 0 0 0 8
2 ಪ.ಪಂ 1 1 0 0 0 0 0 2
3 ಪ್ರವರ್ಗ-1 1 1 0 0 0 0 0 2
4 ಪ್ರವರ್ಗ-2 2 2 2 1 0 0 0 7
5 ಪ್ರವರ್ಗ-2ಬಿ 1 1 0 0 0 0 0 2
6 ಪ್ರವರ್ಗ-3 1 1 0 0 0 0 0 2
7 ಪ್ರವರ್ಗ-3ಬಿ 1 1 0 0 0 0 0 2
8 ಸಾಮಾನ್ಯ ಅರ್ಹತೆ 5 7 6 2 2 1 1 24
ಜುಮ್ಲಾ 14 17 10 4 2 1 1 49

 

 1. ಅರ್ಜಿ ಶುಲ್ಕ:

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳು ರೂ 250.00
ಸಾಮಾನ್ಯ ವರ್ಗ,2ಎ,2ಬಿ, 3ಎ,3ಬಿ ವರ್ಗಕ್ಕೆ ರೂ 500.00

 

ಅರ್ಜಿ ಶುಲ್ಕವನ್ನು ವೆಬ್ ಸೈಟ್ ವಿಳಾಸ http://udupi.nic.in ನಲ್ಲಿ ಲಭ್ಯವಾಗುವ ಚಲನ್ನಿನ ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಸಿಂಡಿಕೇಟ್ ಬ್ಯಾಂಕ್ ನಲ್ಲಿ (Deputy Commissioner, Udupi ಈ ಹೆಸರಿಗೆ) ಪಾವತಿಸಿ ಸ್ವೀಕೃತಿಯನ್ನು ಪಡೆಯಬೇಕು.

 

 1. ಅಭ್ಯರ್ಥಿಗಳಿಗೆ ಸೂಚನೆ ಮತ್ತು ಷರತ್ತುಗಳು:
 1. ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು. ಅಂಚೆ ಅಥವಾ ಕೊರಿಯರ್ ಅಥವಾ ಖುದ್ದಾಗಿ ಸ್ವೀಕರಿಸಲಾಗುವುದಿಲ್ಲ.
 2. ವಯೋಮಿತಿ:-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕೆಳಕಂಡ ವಯೋಮಿತಿ ಹೊಂದಿರತಕ್ಕದ್ದು.

  ಕನಿಷ್ಠ ಗರಿಷ್ಠ
ಪ.ಜಾ/ಪ.ಪಂ/ಪ್ರ-1 18 ವರ್ಷ 40 ವರ್ಷ
2ಎ,2ಬಿ,3ಎ,3ಬಿ 18ವರ್ಷ 38 ವರ್ಷ
ಸಾಮಾನ್ಯ ವರ್ಗ 18 ವರ್ಷ 35 ವರ್ಷ

ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸುವಷ್ಟರ ಮಟ್ಟಿಗೆ ನಿಗಧಿಪಡಿಸಿದೆ.

 1. ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು/ಅವಳು ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೊ ಅಷ್ಟು ವರ್ಷಗಳಿಗೆ 3 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.
 2. ಅಭ್ಯರ್ಥಿಯು ಅಂಗವಿಕಲನಾಗಿದ್ದರೆ 10 ವರ್ಷಗಳು.
 3. ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು.

 1. ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.
 2. ನಿಗಧಿತ ದಿನಾಂಕದ ನಂತರ ಹಾಕಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
 3. ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಭರ್ತಿ ಮಾಡಿದ ಅರ್ಜಿ ಪ್ರತಿಯನ್ನು ನೇಮಕಾತಿ ಪ್ರಾಧಿಕಾರ/ಇಲಾಖಾ ಮುಖ್ಯಸ್ಥರ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.
 4. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಚಾರ ಅಥವಾ ಶಿಫಾರಸ್ಸುಗಳನ್ನು ಮಾಡಿದರೆ ಅಂಥವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
 5. ಅರ್ಜಿದಾರರೊಡನೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
 6. ಆಯ್ಕೆಯನ್ನು ಅಭ್ಯರ್ಥಿಯ ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಮಾತ್ರ ಪರಿಗಣಿಸಲಾಗುವುದು.

ಅಂಗವಿಕಲ ಅಭ್ಯರ್ಥಿಗಳು :

ಚಲನವಲನ ವೈಕಲ್ಯ ಇರುವವರಿಗೆ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ 19/11/2005ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಪಡೆದು, ಅದರ ದೃಢೀಕೃತ ಪ್ರತಿಯನ್ನು ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ಸಲ್ಲಿಸಬೇಕು ಮತ್ತು ಆಯ್ಕೆ ಪ್ರಾಧಿಕಾರದ ಸರ್ಕಾರ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.

 

ಜಾತಿ/ಮೀಸಲಾತಿ ಪ್ರಮಾಣ ಪತ್ರಗಳು:

ಮೀಸಲಾತಿ ಸೌಲಭ್ಯ ಅಪೇಕ್ಷಿಸುವ ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲೆಗಳನ್ನು ನಿಗಧಿತ ನಮೂನೆಯಲ್ಲಿ ಮಾತ್ರ ಸಂಬಂಧಪಟ್ಟ ರೆವಿನ್ಯೂ ಪ್ರಾಧಿಕಾರದಿಂದ (ಸಂಬಂಧಪಟ್ಟ ತಹಶೀಲ್ದಾರ್ ರಿಂದ) ಪಡೆದು ಮೂಲ ದಾಖಲೆಗಳನ್ನು ಪರಿಶೀಲಿಸುವ ದಿನಾಂಕದಂದು ಹಾಜರುಪಡಿಸಬೇಕು. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಿ, ಅವರ ಅಭ್ಯರ್ಥಿತನವನ್ನು ಅರ್ಹತೆಯಡಿಯಲ್ಲಿ ಪರಿಗಣಿಸಲಾಗುವುದು.

ಪ.ಜಾ/ಪ.ಪಂ ದವರು . * ನಮೂನೆ-ಡಿ ಯಲ್ಲಿ, ಪ್ರವರ್ಗ-1 ದವರು : * ನಮೂನೆ-ಇ ಯಲ್ಲಿ. ಪ್ರವರ್ಗ 2ಎ,2ಬಿ,3ಎ,3ಬಿ: ದವರು * ನಮೂನೆ-ಎಫ್ ನಲ್ಲಿ ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ಚಾಲ್ತಿಯಲ್ಲಿರುವ ಪ್ರಮಾಣ ಪತ್ರವನ್ನು ಪಡೆದಿರಬೇಕು.

 

ಯೋಜನಾ ನಿರಾಶ್ರಿತರಾದ ಕುಟುಂಬದ ಅಭ್ಯರ್ಥಿಗಳು:

ಯೋಜನೆಗಳಿಂದ ನಿರಾಶ್ರಿತರ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕ್ಲೇಮ್ ಮಾಡುವ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್ದಾರ್ ರವರು ನೀಡಿದ ಪ್ರಮಾಣ ಪತ್ರವನ್ನು ಪಡೆದಿರಬೇಕು.

 

ಮಾಜಿ ಸೈನಿಕರ ಕುಟುಂಬದ ಅಭ್ಯರ್ಥಿಗಳು:

ಮಾಜಿ ಸೈನಿಕರು ಎನ್ನುವ ಬಗ್ಗೆ ಅಥವಾ ಭಾರತ ದೇಶದ ಒಕ್ಕೂಟ ಸಶಸ್ತ್ರ ದಳದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮರಣ ಹೊಂದಿದ ಅಥವಾ ಶಾಶ್ವತವಾಗಿ ಅಂಗಹೀನರಾದ ವ್ಯಕ್ತಿಗಳ ಕುಟುಂಬದ ಸದಸ್ಯರು ಎಂಬ ಬಗ್ಗೆ ಸಕ್ಷಮ ಮಿಲಿಟರಿ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.

ಗ್ರಾಮೀಣ ಅಭ್ಯರ್ಥಿ :

ಗ್ರಾಮೀಣ ಅಭ್ಯರ್ಥಿ ಎಂದರೆ, ಒಂದು ಹುದ್ದೆಗಾಗಿ ನಿಯಮಿಸಲಾದ ಅರ್ಹತಾ ಪರೀಕ್ಷೆಯು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಾಗಿದ್ದಲ್ಲಿ, 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗದ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರಾಧಿಕಾರಿಯಿಂದ ದೃಢೀಕೃತ ಗ್ರಾಮೀಣ ದೃಢೀಕರಣ ಪತ್ರವನ್ನು ಪಡೆದಿರಬೇಕು. ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು, ಈ ಮೀಸಲಾತಿಯನ್ನು ಪಡೆಯಲು ಅರ್ಹರು.

ಗ್ರಾಮೀಣ ಅಭ್ಯರ್ಥಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೈಮು ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ನಮೂನೆ-2ರ ಪ್ರಮಾಣ ಪತ್ರವಲ್ಲದೇ, ಮೇಲ್ ಸ್ಥರಕ್ಕೆ ಸೇರಿಲ್ಲದಿರುವ ಬಗ್ಗೆ ನಮೂನೆ-1 ರಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ಪಡೆದು, ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ,ಪರಿಶಿಷ್ಠ ಪಂಗಡ, ಪ್ರವರ್ಗ-1 ಪ್ರವರ್ಗ-2ಎ,2ಬಿ,3ಎ,3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ನಿಗಧಿತ ಪ್ರಾಧಿಕಾರಿಗಳಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮೇಲು ರುಜು ಮತ್ತು ಮೊಹರು ಮಾಡಿಸಿರಬೇಕು.

 

ಕನ್ನಡ ಮಾಧ್ಯಮ ಅಭ್ಯರ್ಥಿಗಳು :

ಸರ್ಕಾರದ ಅಧಿಸೂಚನೆ ಸಂ:ಡಿಪಿಎಆರ್ 71 ಎಸ್ ಆರ್ ಆರ್ 2001 ದಿ: 24.10.2002 ರಲ್ಲಿ ಹೊರಡಿಸಿರುವ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ (9)(1)(ಸಿ)ರನ್ವಯ ಅಭ್ಯರ್ಥಿಯು 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆ ಎನ್ನುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರು ಪ್ರಮಾಣ ಪತ್ರವನ್ನು ಪಡೆದಿರಬೇಕು.

ಅರ್ಹತಾ ಷರತ್ತುಗಳು :

 1. ಅರ್ಜಿದಾರರು ಭಾರತೀಯ ನಾಗರೀಕನಾಗಿರತಕ್ಕದ್ದು.
 2. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವವಿರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು. ದೈಹಿಕವಾಗಿ ಸಾಮರ್ಥ್ಯರಿರುವ ಬಗ್ಗೆ ಗ್ರೂಪ್ ‘ಡಿ’ (ಪೌರಕಾರ್ಮಿಕರು/ಲೋಡರ್ಸ್‌) ನೌಕರರಿಗೆ ನಿಗಧಿಪಡಿಸಲಾದ ಕನಿಷ್ಠ ದೇಹ ದಾರ್ಡ್ಯತೆ ಹೊಂದಿರಬೇಕು. (Physically fit in all respects, Distance vision: 6/9 without glasses, Near vision Sn: 0.6, 0.6 without glasses, minimum standard for height – 152 (M) and 150 (F)), Chest – 84 (M) and 79 – (F) in cms). ಈ ಬಗ್ಗೆ ಸರಕಾರಿ ವೈದ್ಯರ ಪ್ರಮಾಣ ಅರ್ಜಿಯೊಂದಿಗೆ ಸಲ್ಲಿಸುವುದು. (ಅನುಬಂಧ – 1 ರಂತೆ)
 3. 1:5 ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ರೈಲ್ವೆ ಕಲಾಸಿ ನೇಮಕಾತಿಗೆ ನಿಗಧಿಪಡಿಸಿರುವ Physical efficiency test ನ್ನು ದಾಖಲೆಗಳನ್ನು ಪರಿಶೀಲಿಸುವ ದಿನದಂದು ನಡೆಸಿ ಅರ್ಹತೆ ಪರಿಗಣಿಸಲಾಗುವುದು.
 4. ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಅಧ್ಯಕ್ಷರು, ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ / ರಾಜ್ಯ ಸರ್ಕಾರ ಕಾಯ್ದಿರಿಸಿಕೊಂಡಿದೆ. ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
 5. ಕನಿಷ್ಟ 10 ವರ್ಷಗಳು ಸ್ಥಳೀಯ ನಿವಾಸಿಯಾಗಿರಬೇಕು. ಈ ಬಗ್ಗೆ ಕನಿಷ್ಠ 10 ವರ್ಷಗಳ ಕಾಲ ಇದೇ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬಗ್ಗೆ ವಾಸ್ತವ್ಯ ದೃಢೀಕರಣ ಪತ್ರ ಸಲ್ಲಿಸುವುದು.

 

ಕೆಳಕಂಡ ಮೂಲ ದಾಖಲೆಗಳನ್ನು ದಾಖಲಾತಿಗಳ ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸಬೇಕು.

 1. ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆ ಅಂಕಪಟ್ಟಿ/ಪ್ರಮಾಣ ಪತ್ರ.
 2. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ/ವರ್ಗಾವಣೆ ಪ್ರಮಾಣ ಪತ್ರ/ಜನ್ಮ ದಿನಾಂಕವನ್ನು ತೋರಿಸುವ ಶೈಕ್ಷಣಿಕ ಸಂಚಿತ ದಾಖಲೆಯ ಉಧೃತ ಭಾಗ.
 3. ಸೈನಿಕ ಸೇವೆಯಿಂದ ಬಿಡುಗಡೆಯಾದ/ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)
 4. ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ,3ಬಿ ಗಳಪ್ರಮಾಣ ಪತ್ರಗಳು (ಮೀಸಲಾತಿ ಕೋರಿದ್ದಲ್ಲಿ)
 5. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2 ರಲ್ಲಿ (ಮೀಸಲಾತಿ ಕೋರಿದ್ದಲ್ಲಿ)
 6. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
 7. ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
 8. ಯೋಜನೆಗಳಿಂದ ನಿರಾಶ್ರಿತರಾದ ಬಗ್ಗೆ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
 9. ವಿಧವೆಯಾದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ
 10. Online ನಲ್ಲಿ ಪಡೆದ Acknowledgement slip ಮತ್ತು ಬ್ಯಾಂಕಿಗೆ ಅರ್ಜಿ ಶುಲ್ಕವನ್ನು ಪಾವತಿಸಿದ challan ನ ಕೌಂಟರ್ ಫೈಲ್ ನ ಮೂಲ ಪ್ರತಿಯನ್ನು ಹಾಜರು ಪಡಿಸುವುದು.
 11. Physical fitness certificate
 12. ವಾಸ್ತವ್ಯ ದೃಢೀಕರಣ ಪತ್ರ.
 13. ಮೇಲ್ಕಂಡಂತೆ ನಿಗದಿಪಡಿಸಿದ ಎಲ್ಲಾ ದಾಖಲೆಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ ಮೂಲ ದಾಖಲಾತಿಗಳ ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

ಹೆಲ್ಪ್‌ ಲೈನ್ ನಂ: 0820 – 2574933

 

LAST DATE TO APPLY ONLINE : 13.11.2015

 

ಅಗತ್ಯ ಕೊಂಡಿಗಳು

 1. Apply Online – ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸು
 2. Notification – ಅಧಿಸೂಚನೆ

 

These posts are in Udupi and recommended for the job seekers of Udupi and Mangalore (D.K.) districts and surroundings. Apply for the Government Jobs available in Udupi district before the last date specified in the notification.

 

© This is originally posted in: www.coastalhut.com

Disclaimer: This post has been published for the public interest. Our team will takes an elaborative study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designedhosted and managed by Crust.