ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡೌನ್ಲೊಡ್ ಮಾಡಿಕೊಂಡು ದಾಖಲಾತಿಗಳ ದೃಢೀಕರಣ ಪ್ರತಿಗಳನ್ನು ಲಗತ್ತಿಸಿ ಆಫ್ಲೈನ್/ಪೋಸ್ಟ್ ಮುಖಾಂತರ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಬಹುದು.
ವಾಹನ ಚಾಲಕರು
ಒಟ್ಟು ಹುದ್ದೆ : 03
ವೇತನಶ್ರೇಣಿ : ರೂ.11600/- – ರೂ.21000/-
ವಿದ್ಯಾರ್ಹತೆ :
- 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
- ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು
- ಚಾಲ್ತಿಯಲ್ಲಿರುವ ಪ್ರಥಮ ಚಿಕಿತ್ಸಾ ಪ್ರಮಾಣ ಪತ್ರವನ್ನು ಹೊಂದಿರಬೇಕು
- ದೇಹದಾರ್ಢ್ಯತೆ ಪ್ರಮಾಣಪತ್ರ ಹೊಂದಿರಬೇಕು
ವಯೋಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- ಸಾಮಾನ್ಯ ವರ್ಗ : 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ : 38ವರ್ಷ
- ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1 : 40 ವರ್ಷ
ಅರ್ಜಿ ಶುಲ್ಕ :
- ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ : ರೂ.10/-
- ಪ.ಜಾತಿ, ಪ.ಪಂಗಡ ಮತ್ತು ಪ್ರವರ್ಗ 1 ಕ್ಕೆ ಸೇರಿದ ಅಭ್ಯಥಿಗಳಿಗೆ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ ಅಬಕಾರಿ ಉಪ ಆಯುಕ್ತರು ಕೊಪ್ಪಳ ಇವರ ಹೆಸರಿನಲ್ಲಿ ಪಡೆಯತಕ್ಕದ್ದು.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು :
- 7ನೇ ತರಗತಿಯ ಅಂಕಪಟ್ಟಿ (ಗ್ರೇಡ್ ಕಾರ್ಡ್, ಕ್ಯೂಮುಲೇಟಿವ್ ಕಾರ್ಡ್, ಪ್ರಗತಿ ಪತ್ರವನ್ನು ಪರಿಗಣಿಸಲಾಗುವುದಿಲ್ಲ. ಅಂತಹ ಅಭ್ಯರ್ಥಿಗಳು ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಂದ ಪರಿವರ್ತಿಸಿದ ಅಂಕಪಟ್ಟಿಯನ್ನು ಪಡೆದು ಸಲ್ಲಿಸಬಹುದು).
- ಚಾಲ್ತಿಯಲ್ಲಿರುವ ಲಘು ಮೋಟಾರು ವಾಹನ ಚಾಲನಾ ಪರವಾನಿಗೆ
- ನಿಗದಿತ ದೇಹದಾರ್ಢ್ಯತೆ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ
- ಜನ್ಮ ದಿನಾಂಕವನ್ನು ನಮೂದಿಸಿರುವ ಶಾಲಾ ವರ್ಗಾವಣೆ ಪ್ರಮಾಣ ಪತ್ರ
- ಮೀಸಲಾತಿ ಕೋರಿದಲ್ಲಿ ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರ
- ಚಾಲ್ತಿಯಲ್ಲಿರುವ ಪ್ರಥಮ ಚಿಕಿತ್ಸೆ ಪ್ರಮಾಣ ಪತ್ರ
- ಹೈ.ಕ ಪ್ರದೇಶ ವ್ಯಾಪ್ತಿಗೆ ಒಳಪಡುವ ಕುರಿತು ಸಹಾಯಕ ಆಯುಕ್ತರು ನೀಡಿರುವ ಪ್ರಮಾಣ ಪತ್ರ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.02.2018 ರ ಸಾಯಂಕಾಲ 5.30
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅರ್ಜಿ ಸಲ್ಲಿಸಬೇಕಾದ ವಿಳಾಸ :
ಸದಸ್ಯ ಕಾರ್ಯದರ್ಶಿಗಳು ಹಾಗೂ ಅಬಕಾರಿ ಉಪ ಆಯುಕ್ತರು
ಜಿಲ್ಲಾಡಳಿತ ಭವನ , ಹೊಸಪೇಟೆ ರೋಡ್
ಕೊಪ್ಪಳ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.