ಕ.ರಾ.ರ.ಸಾ.ನಿಗಮ, ಅವಶ್ಯಕವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಾದ ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ದರ್ಜೆ- 3 ರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕ.ರಾ.ರ.ಸಾ.ನಿ. ನೇಮಕಾತಿ – 2016 ರ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳತಕ್ಕದ್ದು.
ಆಯ್ದ ಅಭ್ಯರ್ಥಿಗಳನ್ನು ಕ.ರಾ.ರ.ಸಾ.ನಿಗಮದ ವ್ಯಾಪ್ತಿಯಲ್ಲಿ ಬರುವ ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು/ಹಾಸನ, ಬೆಂಗಳೂರು ಕೇಂದ್ರೀಯ, ರಾಮನಗರ, ಮಂಡ್ಯ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಗಳೂರು, ಪುತ್ತೂರು ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಭಾಗ/ಘಟಕಗಳಿಗೆ ನಿಯೋಜಿಸಬಹುದಾಗಿರುತ್ತದೆ.

 

ಖಾಲಿ ಇರುವ ಹುದ್ದೆಗಳ ವಿವರ :
1. ಕುಶಲಕರ್ಮಿ ದರ್ಜೆ- 3 :

 • ಆಟೋ ಮೆಕ್ಯಾನಿಕ್
  ಒಟ್ಟು ಹುದ್ದೆಗಳು : 160
 • ಆಟೋ ಬಾಡಿ ಬಿಲ್ಡರ್
  ಒಟ್ಟು ಹುದ್ದೆಗಳು : 44
 • ಆಟೋ ಎಲೆಕ್ಟ್ರಿಷಿಯನ್
  ಒಟ್ಟು ಹುದ್ದೆಗಳು : 60
 • ಆಟೋ ಪೇಂಟರ್
  ಒಟ್ಟು ಹುದ್ದೆಗಳು : 4
 • ಆಟೋ ವೆಲ್ಡರ್
  ಒಟ್ಟು ಹುದ್ದೆಗಳು : 15
 • ಆಟೋ ಮೆಷಿನಿಸ್ಟ್
  ಒಟ್ಟು ಹುದ್ದೆಗಳು : 1

ವೇತನ ಶ್ರೇಣಿ : ರೂ. 12410-19180

2. ತಾಂತ್ರಿಕ ಸಹಾಯಕ ದರ್ಜೆ- 3 :

 • ಒಟ್ಟು ಹುದ್ದೆಗಳು : 556
 • ವೇತನ ಶ್ರೇಣಿ : ರೂ. 10340-14400

 

ವಿದ್ಯಾರ್ಹತೆ :
1. ಕುಶಲಕರ್ಮಿ (ಆಟೋ ಮೆಕ್ಯಾನಿಕ್, ಆಟೋ ಬಾಡಿ ಬಿಲ್ಡರ್, ಆಟೋ ಪೇಂಟರ್, ಆಟೋ ವೆಲ್ಡರ್, ಆಟೋ ಮೆಷಿನಿಸ್ಟ್) :

 • ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಅಟೋಮೊಬೈಲ್/ಅಂಡ್ ಶೀಟ್ ಮೆಟಲ್ ಟೆಕ್ನಾಲಜಿಯಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು.
 • ಚಾಲ್ತಿಯಲ್ಲಿರುವ ಭಾರಿವಾಹನ ಚಾಲನಾ ಪರವಾನಗಿ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.

ಕುಶಲಕರ್ಮಿ ( ಆಟೋ ಎಲೆಕ್ಟ್ರಿಷಿಯನ್ ) :

 • ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್/ಮೆಕಟ್ರೋನಿಕ್ಸ್ ಇಂಜಿನಿಯರಿಂಗ್/ರೆಫ್ರಿಜರೇಶನ್ ಅಂಡ್ ಏರ್ ಕಂಡೀಷನಿಂಗ್ ನಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು.
 • ಚಾಲ್ತಿಯಲ್ಲಿರುವ ಭಾರಿವಾಹನ ಚಾಲನಾ ಪರವಾನಗಿ ಹೊಂದಿರಬೇಕು ಅಥವಾ ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಹೊಂದತಕ್ಕದ್ದು.

2. ತಾಂತ್ರಿಕ ಸಹಾಯಕ :

 • ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಐ./ಐ.ಟಿ.ಸಿ./ಎನ್.ಐ.ಸಿ.ಯನ್ನು ಮೆಕ್ಯಾನಿಕಲ್ (ಮೋಟಾರ್ ವೆಹಿಕಲ್)/ಡೀಸೆಲ್ ಮೆಕ್ಯಾನಿಕ್/ಆಟೋ ಎಲೆಕ್ಟ್ರಿಷಿಯನ್/ವೆಲ್ಡರ್/ಶೀಟ್ ಮೆಟಲ್ ವರ್ಕರ್/ಎಲೆಕ್ಟ್ರಾನಿಕ್ ಮೆಕ್ಯಾನಿಕ್/ಅಪೋಲ್ ಸ್ಟ್ರಿ/ಡ್ರಾಫ್ಟ್ಸ್ ಮ್ಯಾನ್ (ಮೆಕ್ಯಾನಿಕಲ್)/ಪಿಟ್ಟರ್/ಮೆಷಿನಿಸ್ಟ್/ಟೈರ್ ಫಿಟ್ಟಿಂಗ್/ವಲ್ಕನೈಸಿಂಗ್/ಪೈಂಟಿಂಗ್/ರೆಫ್ರಿಜರೇಶನ್ ಅಂಡ್ ಏರ್ ಕಂಡೀಷನಿಂಗ್/ಟರ್ನರ್/ಅಟೋಮೊಬೈಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಪ್ಯಾಟಿಕ್ರೇಶನ್ (ಪಿಟ್ಟಿಂಗ್ ಅಂಡ್ ವೆಲ್ಡಿಂಗ್) ವೃತ್ತಿಗಳಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
 • ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗೆ ಲಘು ಮೋಟಾರುವಾಹನ ಚಾಲನಾ ಪರವಾನಗಿ ಪಡೆಯತಕ್ಕದ್ದು.

 

ವಯೋಮಿತಿ : ( 04.02.2016 ರರೊಳಗೆ )
1. ಕನಿಷ್ಟ ವಯಸ್ಸು : 18 ವರ್ಷಗಳು ಪೂರ್ಣಗೊಂಡಿರಬೇಕು.
2. ಗರಿಷ್ಟ ವಯಸ್ಸು :

 • ಸಾಮಾನ್ಯ : 35 ವರ್ಷಗಳು
 • 2ಎ, 2ಬಿ, 3ಎ, 3ಬಿ : 38 ವರ್ಷಗಳು
 • ವರ್ಗ-1, ಎಸ್.ಸಿ/ಎಸ್.ಟಿ : 40 ವರ್ಷಗಳು

ಶುಲ್ಕದ ವಿವರಗಳು :

 • ಎಸ್.ಸಿ/ಎಸ್.ಟಿ, ವರ್ಗ-1, ಮಾಜಿ ಸೈನಿಕ ಮತ್ತು ಅವಲಂಬಿತರಿಗೆ : ರೂ. 200
 • ಇತರರರಿಗೆ : ರೂ. 400

ಗಮನಿಸಿ : ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ನಿಗದಿಪಡಿಸಿದ ಮೊತ್ತವನ್ನು ಕೂಡಿಸಿ ಒಟ್ಟು ಹಣದ ಮೊತ್ತವನ್ನು ಒಂದೇ ಚಲನ್ ನಲ್ಲಿ ಪಾವತಿ ಮಾಡಬೇಕು. ( ಉದಾಹರಣೆಗೆ: ಒಬ್ಬ ಸಾಮಾನ್ಯ ಅಭ್ಯರ್ಥಿ ಒಂದೇ ಅರ್ಜಿಯಲ್ಲಿ ಮೂರು ಹುದ್ದೆಗಳನ್ನು ಆಯ್ಕೆ ಮಾಡಿದಲ್ಲಿ, ರೂ. 1200 ರ ಮೊತ್ತವನ್ನು ಚಲನ್ ನಲ್ಲಿ ನಮೂದಿಸತಕ್ಕದ್ದು.) ಅರ್ಜಿ ಶುಲ್ಕವನ್ನು ಯಾವುದೇ ಎಲೆಕ್ಟ್ರಾನಿಕ್ ಅಂಚೆಕಛೇರಿಯಲ್ಲಿ ( Computerized Post Offices Only ) ಮಾತ್ರ ಇ-ಪೇಮೆಂಟ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ.

ಮುಖ್ಯವಾದ ದಿನಾಂಕಗಳು :

 • ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ : 14.01.2016
 • ಆನ್ ಲೈನ್ ನೋಂದಣಿಗೆ ಕೊನೆಯ ದಿನಾಂಕ : 04.02.2016 ರ ಸಂಜೆ 5.30 ಗಂಟೆ
 • ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 06.02.2016

 

ಅಧಿಕೃತ ಕೊಂಡಿಗಳು :