ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ, ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳಿಗೆ ಸ್ಪೋರ್ಟ್ಸ್ ಕೋಟಾದಡಿಯಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸದರಿ ಹುದ್ದೆಗಳಿಗೆ ಅರ್ಜಿ, ಶೈಕ್ಷಣಿಕ ದಾಖಲೆ, ಜಾತಿ ದೃಢೀಕರಣ ಪತ್ರ, ಕನ್ನಡ ಮಾಧ್ಯಮ ಮೀಸಲಾತಿ, ಹೈದರಾಬಾದ್-ಕರ್ನಾಟಕ ಮೀಸಲಾತಿ,ಗ್ರಾಮೀಣ ಮೀಸಲಾತಿ ಹಾಗೂ ಸ್ಪೋರ್ಟ್ಸ್ ಕೋಟಾದ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ಇಲಾಖಾ ವೆಬ್ಸೈಟ್ಗೆ ಅಪ್ಲೋಡ್ ಮಾಡಲು ತಿಳಿಸಲಾಗಿತ್ತು.
ಸದರಿ ಹುದ್ದೆಗಳಿಗೆ ಅರ್ಜಿ ಹಾಕಿರುವ ಈ ಕೆಳಕಂಡ ಅಭ್ಯರ್ಥಿಗಳು ಆಪ್ಲೋಡ್ ಮಾಡಿರುವ ದಾಖಲಾತಿಗಳು ಅಸ್ಪಷ್ಟವಾಗಿದ್ದು, ಅಂತಹ ಅಭ್ಯರ್ಥಿಗಳು ಮೇಲ್ಕಂಡ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ದಿನಾಂಕ 15.03.2018 ರಂದು ಬೆಳಿಗ್ಗೆ 10.30 ಗಂಟೆಗೆ ಅರಣ್ಯ ಭವನದ 8ನೇ ಮಹಡಿ, ಮಲ್ಲೇಶ್ವರಂ 18ನೇ ಅಡ್ಡರಸ್ತೆ, ಬೆಂಗಳೂರು-560003 ಇಲ್ಲಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯಸ್ಥರು, ಅರಣ್ಯ ಪಡೆ, ಇವರಿಗೆ ಹಾಜರಿಪಡಿಸಬೇಕಾಗಿ ಸೂಚಿಸಲಾಗಿದೆ.
ಅಸ್ಪಷ್ಟ ದಾಖಲಾತಿ ಆಪ್ಲೋಡ್ ಮಾಡಿರುವ ಅಭ್ಯರ್ಥಿಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಧಿಕೃತ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.